ಗಂಗಾವತಿ (ಕೊಪ್ಪಳ):ನಗರದ ನೇತ್ರ ತಜ್ಞ ಹನುಮಂತಪ್ಪ ಅದ್ದಪ್ಪ ಹಾಗೂ ದಂತ ವೈದ್ಯೆ ಪರಿಮಳ ಅವರ ಪುತ್ರ ಸಂಜಯ್ ಅದ್ದಪ್ಪ ಎಂಬುವರು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್)ನಲ್ಲಿ 635 ಅಂಕ ಗಳಿಸಿ ಅಖಿಲ ಭಾರತದ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಮೂಲಕ
3746ನೇ ರ‍್ಯಾಂಕ್ ಗಳಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಗಂಗಾವತಿ ವಿದ್ಯಾರ್ಥಿಯ ಸಾಧನೆ: 3746ನೇ ರ‍್ಯಾಂಕ್ ಪಡೆದ ಸಂಜಯ್
ನೇತ್ರ ತಜ್ಞ ಹನುಮಂತಪ್ಪ ಅದ್ದಪ್ಪ ಹಾಗೂ ದಂತ ವೈದ್ಯೆ ಪರಿಮಳ ಅವರ ಪುತ್ರ ಸಂಜಯ್ ಅದ್ದಪ್ಪ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್)ಯಲ್ಲಿ 635 ಅಂಕ ಗಳಿಸುವ ಮೂಲಕ ಅಖಿಲ ಭಾರತದ ಮಟ್ಟದಲ್ಲಿ 3746ನೇ ರ‍್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾರೆ.
ಸಂಜಯ್ ಅದ್ದಪ್ಪ
ಒಟ್ಟು 720 ಅಂಕಕ್ಕೆ 635 ಅಂಕ ಗಳಿಸುವ ಮೂಲಕ ಸಂಜಯ್ ಸಾಧನೆ ಮಾಡಿದ್ದಾರೆ. ನಗರದ ವಡ್ಡರಹಟ್ಟಿಯ ಚೈತನ್ಯ ಟೆಕ್ನೋದಲ್ಲಿ ಪ್ರಾಥಮಿಕ ಹಾಗೂ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಸಂಜಯ್, ಸತತ ಪರಿಶ್ರಮ ಹಾಗೂ ಕಾಲಕ್ಕೆ ತಕ್ಕಂತೆ ಪಡೆಯುತ್ತಿದ್ದ ಸಲಹೆ ಈ ಸಾಧನೆಗೆ ಕಾರಣ ಎಂದು ತಂದೆ ಹನುಮಂತಪ್ಪ ಹೇಳಿದ್ದಾರೆ.