ಕರ್ನಾಟಕ

karnataka

ETV Bharat / state

ಗಂಗಾವತಿ: ಹೋಂ ಗಾರ್ಡ್ ಮೇಲೆ ಕಲ್ಲು ತೂರಾಟ... ಮೂವರು ಆರೋಪಿಗಳ ಬಂಧನ - ಮೂವರು ಆರೋಪಿಗಳ ಬಂಧನ

ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಹೇಳಿದ ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

arrgangavathi-stone-throwing-home-guards-arrest-of-threeested
aಗಂಗಾವತಿ: ಹೋಂ ಗಾರ್ಡ್ ಮೇಲೆ ಕಲ್ಲು ತೂರಾಟ, ಮೂವರು ಆರೋಪಿಗಳ ಬಂಧನ..!rrested

By

Published : May 5, 2020, 11:26 PM IST

ಗಂಗಾವತಿ: ಮದ್ಯದಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಹೇಳಿದ ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಗಂಗಾವತಿ: ಹೋಂ ಗಾರ್ಡ್ ಮೇಲೆ ಕಲ್ಲು ತೂರಾಟ... ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು ಮಹೆಬೂಬ ನಗರದ ಶಂಷೀರ ವಲಿಸಾಬ, ಅಲ್ತಾಫ್ ಖುರೇಷಿ ಹಾಗೂ ಕಾಸೀಂಭಾಷಾ ಕಾಸಿಂಸಾಬ ಎಂದು ತಿಳಿದು ಬಂದಿದೆ. ಇಲ್ಲಿನ ಮಹಾವೀರ ಸಮೀಪದ‌ ಮದ್ಯದ ಅಂಗಡಿಯಲ್ಲಿ ಎಣ್ಣೆ ಖರೀದಿಸುವಾಗ ಸಾಮಾಜಿಕ ಅಂತರ ಕಾಪಾಡುವಂತೆ ಹೋಂ ಗಾರ್ಡ್ ಮಹಬೂಬ ಜಿಲಾನ್ ಕುಷ್ಟಗಿ ಎಂಬುವವರು ಸೂಚನೆ ನೀಡಿದ್ದರು.

ಆದರೆ ಸಕಾಲಕ್ಕೆ ಎಣ್ಣೆ ಸಿಗದೇ ಕುಪಿತರಾದ ಈ ಯುವಕರು ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗೆ ಗಾಯವಾಗಿತ್ತು. ಹೀಗಾಗಿ ಮೆಹಬೂಬ ನೀಡಿದ ದೂರಿನ ಹಿನ್ನೆಲೆ ಶಹರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ABOUT THE AUTHOR

...view details