ಕರ್ನಾಟಕ

karnataka

ETV Bharat / state

ಗಂಗಾವತಿ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ದಿಢೀರ್ ವರ್ಗಾವಣೆ

ಗಂಗಾವತಿ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ಸುರೇಶ ತಳವಾರ್ ಅವರನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿ ಸರ್ಕಲ್​ಗೆ ​ವರ್ಗಾವಣೆ ಮಾಡಲಾಗಿದೆ.

Circle Inspector Suresh Talwar
ಸರ್ಕಲ್ ಇನ್ಸ್​ಪೆಕ್ಟರ್ ಸುರೇಶ ತಳವಾರ್

By

Published : Sep 17, 2020, 11:58 AM IST

ಗಂಗಾವತಿ: ಇಲ್ಲಿನ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ ತಳವಾರ್ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ಸರ್ಕಲ್​ಗೆ​ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ಆದೇಶ..

ಕೇವಲ ಒದು ವರ್ಷದ ಹಿಂದಷ್ಟೆ ಕುಷ್ಟಗಿಯಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದ ಸುರೇಶ ತಳವಾರ್, ಗ್ರಾಮೀಣ ವೃತ್ತದಲ್ಲಿ ಸಾಕಷ್ಟು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರು. ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಶ್ರಮಿಸುತ್ತಿದ್ದರು.

ಕುಷ್ಟಗಿಯಲ್ಲಿ ಕೆರೆ ಹೂಳು ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಗಂಗಾವತಿ ಗ್ರಾಮೀಣ ಭಾಗದಲ್ಲೂ ಅಕ್ರಮ ಮದ್ಯ ಮಾರಾಟ, ಅಕ್ರಮ ಗಣಿಗಾರಿಕೆ ಹಾಗೂ ಕಳ್ಳ ಸಾಗಣೆ ನಿಯಂತ್ರಣಕ್ಕೆ ಶ್ರಮಿಸಿದ್ದರು. ಆದರೆ ದಿಢೀರ್ ಎಂದು ವರ್ಗಾವಣೆಯಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ABOUT THE AUTHOR

...view details