ಗಂಗಾವತಿ:ಸಾರ್ವಜನಿಕರು ಹಾಗು ಬೀದಿಬದಿ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ಮಾಡಿ ಹಣ ವಸೂಲಿ ಮಾಡುತ್ತಾರೆ ಎಂಬ ಗಂಭೀರ ಆರೋಪಕ್ಕೀಡಾಗಿದ್ದ ಇಲ್ಲಿನ ನಗರಠಾಣೆಯ ಪಿಎಸ್ಐ ಶಹನಾಜ್ ಬೇಗಂ ಆರೋಪ ಮುಕ್ತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಟಿ.ಶ್ರೀಧರ, ಸಾರ್ವಜನಿಕರು ಆರೋಪ ಮಾಡುವುದು ಸಹಜ. ಆದರೆ ಒಬ್ಬ ಅಧಿಕಾರಿ ಮೇಲೆ ಆರೋಪ ಮಾಡುವಾಗ ಸೂಕ್ತ ಸಾಕ್ಷ್ಯಗಳನ್ನು ಒದಗಿಸಬೇಕು. ಯಾವುದೇ ಸಾಕ್ಷ್ಯಗಳಿಲ್ಲದೇ ಶಂಕರಗೌಡ ಎಂಬುವವರು ದೂರು ನೀಡಿದ್ದಾರೆ. ಆದಾಗ್ಯೂ ವಿಚಾರಣೆ ಮಾಡಲಾಗಿದ್ದು, ಅಂತಹ ಗಂಭೀರ ಸ್ವರೂಪದ ಆರೋಪಕ್ಕೆ ಯಾವುದೇ ಪುಷ್ಠಿ ನೀಡುವ ಸಾಕ್ಷ್ಯ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.