ಕರ್ನಾಟಕ

karnataka

ETV Bharat / state

ಜಿಲ್ಲೆಯಲ್ಲಿ 16.5 ಲಕ್ಷ ಜನಸಂಖ್ಯೆ.. ಯಾರೊಬ್ಬರು ಸ್ವಯಂ ಸೇವಕರಾಗಿ ಮುಂದೆ ಬರಲಿಲ್ಲ - gangavathi in koppal

ಕೊರೊನಾ ಸೋಂಕಿತರಿಗೆ ಆಹಾರ, ನೀರು, ಊಟ ತಲುಪಿಸುವ ಉದ್ದೇಶಕ್ಕೆ ಆಸಕ್ತ ಸಾರ್ವಜನಿಕರಿಂದ ಸ್ವಯಂ ಸೇವಕರಾಗಿ ಕೆಲಸ ಮಾಡಲು ಜಿಲ್ಲಾಧಿಕಾರಿ ಅರ್ಜಿ ಆಹ್ವಾನಿಸಿದ್ದರು..

Gangavathi: No one came forward corona volunteer
ಜಿಲ್ಲೆಯಲ್ಲಿ 16.5 ಲಕ್ಷ ಜನಸಂಖ್ಯೆ: ಯಾರೊಬ್ಬರು ಸ್ವಯಂ ಸೇವಕರಾಗಿ ಮುಂದೆ ಬರಲಿಲ್ಲ

By

Published : Jul 6, 2020, 8:15 PM IST

ಗಂಗಾವತಿ(ಕೊಪ್ಪಳ): ಜಿಲ್ಲೆಯಲ್ಲಿ 16.5 ಲಕ್ಷ ಜನಸಂಖ್ಯೆ ಇದೆ. ಆದರೆ, ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಯಾರೊಬ್ಬರು ವಾಲಂಟಿಯರ್ ಆಗಲು ಮುಂದೆ ಬರಲಿಲ್ಲ ಎಂದು ಉಪ ವಿಭಾಗ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ಹೇಳಿದರು.

ಜಿಲ್ಲೆಯಲ್ಲಿ ಯಾರೊಬ್ಬರು ಸ್ವಯಂ ಸೇವಕರಾಗಿ ಮುಂದೆ ಬರಲಿಲ್ಲ

ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನಾದಂತ ಸಂದಿಗ್ಧ ಸ್ಥಿತಿಯಲ್ಲಿ ವಿವಿಧ ಇಲಾಖೆಯ ಸಿಬ್ಬಂದಿ ಅದರಲ್ಲೂ ಆರೋಗ್ಯ ಇಲಾಖೆಯ ನೌಕರರು ತಮ್ಮ ಜೀವ ಒತ್ತೆಯಿಟ್ಟು ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಆಹಾರ, ನೀರು, ಊಟ ತಲುಪಿಸುವ ಉದ್ದೇಶಕ್ಕೆ ಆಸಕ್ತ ಸಾರ್ವಜನಿಕರಿಂದ ಸ್ವಯಂ ಸೇವಕರಾಗಿ ಕೆಲಸ ಮಾಡಲು ಜಿಲ್ಲಾಧಿಕಾರಿ ಅರ್ಜಿ ಆಹ್ವಾನಿಸಿದ್ದರು.

ಆದರೆ, ಜಿಲ್ಲೆಯಲ್ಲಿ ಯಾರೊಬ್ಬರು ಸ್ವಯಂ ಪ್ರೇರಣೆಯಿಂದ ಮುಂದೆ ಬರಲಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಕೊರೊನದಂತ ಯುದ್ಧದ ಸಮಯದಲ್ಲಿ ಸಣ್ಣಪುಟ್ಟ ಲೋಪದೋಷಗಳು ಸಹಜ. ಆದರೆ, ಅದನ್ನ ದೊಡ್ಡದಾಗಿ ಬಿಂಬಿಸುವುದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಯ ನೈತಿಕತೆ ಕುಸಿಯುತ್ತದೆ ಎಂದಿದ್ದಾರೆ.

ತಪ್ಪನ್ನು ಹೇಳುವುದು ಮಾಧ್ಯಮಗಳ ಕೆಲಸ. ಅದನ್ನು ಮಾಡಲಿ. ಆದರೆ, ಇಲ್ಲದ್ದನ್ನು ಸೃಷ್ಟಿಸುವುದರಿಂದ ಇಡೀ ಇಲಾಖೆಯ ನೌಕರರ ಆತ್ಮಸ್ಥೈರ್ಯದ ಮೇಲೆ ಹೊಡೆತ ಬಿದ್ದಂತಾಗುತ್ತದೆ. ಇದಕ್ಕೆ ಮಾಧ್ಯಮಗಳು ಅವಕಾಶ ನೀಡಬಾರದು. ಪ್ರೋತ್ಸಾಹ, ಪ್ರೇರಣೆ ನೀಡುವಂತ ಕೆಲಸ ಮಾಧ್ಯಮಗಳಿಂದಾಗಬೇಕು ಎಂದರು.

ನಗರಸಭೆಯ ಪೌರಾಯುಕ್ತ ಎಸ್ ಎಫ್ ಈಳಿಗೇರ, ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ವಿಶ್ವನಾಥ ಬೆಳಗಲ್ ಮಠ, ಕಾರ್ಯದರ್ಶಿ ಹರೀಶ್ ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ವೇದಿಕೆಯಲ್ಲಿದ್ದರು.

ABOUT THE AUTHOR

...view details