ಗಂಗಾವತಿ:ಇಲ್ಲಿನ ನಗರಸಭೆಯ ಚುಕ್ಕಾಣಿ ಹಿಡಿಯುವ ಉದ್ದೇಶದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರತರಹದ ಲಾಬಿ ನಡೆಸಿ, ತಂತ್ರ-ರಣತಂತ್ರ ಹೆಣೆದಿದ್ದಾರೆ. ಈ ಹಿನ್ನೆಲೆ ಇದೀಗ ಎರಡೂ ಪಕ್ಷದ ಒಟ್ಟು ಆರು ನಗರಸಭಾ ಸದಸ್ಯರ ಮೇಲೆ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿವೆ.
ಬಿಜೆಪಿ ಸದಸ್ಯೆ ಸುಧಾ ಸೋಮನಾಥ ಅವರನ್ನು ಅಪಹರಿಸಿದ್ದಾಗಿ ದಾಖಲಾದ ದೂರಿನಲ್ಲಿ ಕಾಂಗ್ರೆಸ್ ಸದಸ್ಯರಾದ ಮನೋಹರಸ್ವಾಮಿ, ಶಾಮೀದ್ ಮನಿಯಾರ ಹಾಗೂ ಸೋಮನಾಥ ಭಂಡಾರಿ ಅವರ ಮೇಲೆ ಸದಸ್ಯೆಯ ಅತ್ತೆ ಅ.22ರಂದು ದೂರು ದಾಖಲಿಸಿದ್ದರು.