ಕರ್ನಾಟಕ

karnataka

ETV Bharat / state

ಶಾಸಕ ಪರಣ್ಣ ಮುನವಳ್ಳಿ ವಿಜಯನಗರ ಕ್ಷೇತ್ರದ ಪ್ರಚಾರದ ಉಸ್ತುವಾರಿ - Gangawati is the BJP MLA

ರಾಜ್ಯ ಬಿಜೆಪಿ  ನಾಯಕರು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ವಿಜಯನಗರದ ಕಮಲಾಪುರ ಜಿಲ್ಲಾ ಪಂಚಾಯಿತಿಯ ನಾಲ್ಕಾರು ಗ್ರಾಮಗಳ ಉಸ್ತುವಾರಿಯನ್ನು ವಹಿಸಿದ್ದಾರೆ.

Gangavathi MLA Paranana Munavalli
ಶಾಸಕ ಪರಣ್ಣ ಮುನವಳ್ಳಿ ವಿಜಯನಗರ ಕ್ಷೇತ್ರದ ಪ್ರಚಾರದ ಉಸ್ತುವಾರಿ

By

Published : Nov 29, 2019, 9:12 AM IST

ಕೊಪ್ಪಳ:ಬಳ್ಳಾರಿ ಜಿಲ್ಲೆಯ ಹೊಸಪೇಟೆ ವಿಜಯನಗರ ಕ್ಷೇತ್ರದ ಉಪಚುನಾವಣೆಯನ್ನ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ಪಕ್ಷದ ನೆರೆಯ ಜಿಲ್ಲೆಯ ತಮ್ಮ ಶಾಸಕರನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುತ್ತಿವೆ.

ಹೀಗಾಗಿ ರಾಜ್ಯ ಬಿಜೆಪಿ ನಾಯಕರು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ವಿಜಯನಗರದ ಕಮಲಾಪುರ ಜಿಲ್ಲಾ ಪಂಚಾಯಿತಿಯ ನಾಲ್ಕಾರು ಗ್ರಾಮಗಳ ಉಸ್ತುವಾರಿಯನ್ನು ವಹಿಸಿದ್ದಾರೆ.

ಶಾಸಕ ಮುನವಳ್ಳಿ ವಿಜಯನಗರ ಕ್ಷೇತ್ರದ ಪ್ರಚಾರ, ಸಂಘಟನೆ ಸೇರಿದಂತೆ ಆಯಾ ಗ್ರಾಮಗಳ ಮತ ಸೆಳೆಯುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ABOUT THE AUTHOR

...view details