ಗಂಗಾವತಿ(ಕೊಪ್ಪಳ): ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಜಬ್ಬಲಗುಡ್ಡ ಸಮೀಪದ ಖಾಸಗಿ ಹಾಲು ಉತ್ಪಾದನಾ ಘಟಕಕ್ಕಾಗಿ ಬೃಹತ್ ಮರಗಳ ಮಾರಣಹೋಮ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಖಾಸಗಿ ಹಾಲಿನ ಡೈರಿಗಾಗಿ ಬೃಹತ್ ಮರಗಳ ಮಾರಣಹೋಮ! - ಗಂಗಾವತಿ ಸುದ್ದಿ
ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಸಮೀಪದಲ್ಲಿ ಖಾಸಗಿ ಹಾಲು ಉತ್ಪಾದನಾ ಘಟಕಕ್ಕಾಗಿ ಬೃಹತ್ ಮರಗಳ ಮಾರಣಹೋಮ ನಡೆಯುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರವೇ ಮುಖಂಡ ಪಂಪಣ್ಣ ನಾಯಕ್ ಒತ್ತಾಯಿಸಿದ್ದಾರೆ.
ಗಂಗಾವತಿ: ಖಾಸಗಿ ಹಾಲಿನ ಡೈರಿಗಾಗಿ ಬೃಹತ್ ಮರಗಳ ಮಾರಣಹೋಮ
ಗಂಗಾವತಿ ತಾಲೂಕಿನ ಜಬ್ಬಲಗುಡ್ಡ ಸಮೀಪದಲ್ಲಿರುವ ಈ ಹಾಲು ಉತ್ಪಾದನಾ ಘಟಕಕ್ಕೆ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ನೆರೆಯ ಆಂಧ್ರಪ್ರದೇಶದಿಂದ ತರಲಾಗುತ್ತಿದೆ ಎಂದು ಅರಣ್ಯ ಇಲಾಖೆಗೆ ತಪ್ಪು ಮಾಹಿತಿ ನೀಡಿ, ವಂಚಿಸಲಾಗುತ್ತಿದೆ.
ಒಂದು ಲೋಡ್ ಮರಗಳನ್ನು ಆಂಧ್ರದಿಂದ ತಂದರೆ, ಹತ್ತಾರು ಲೋಡ್ ಮರಗಳನ್ನು ಸಮೀಪದ ಕನಕಗಿರಿ ಪ್ರದೇಶದಿಂದ ಅಕ್ರಮವಾಗಿ ಕಡಿದು ತರಲಾಗುತ್ತಿದೆ ಎಂದು ಕರವೇ ಮುಖಂಡ ಪಂಪಣ್ಣ ನಾಯಕ್ ಆರೋಪಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.