ಗಂಗಾವತಿ (ಕೊಪ್ಪಳ) :ಮೈಸೂರು ದಸರಾ ಮಾದರಿಯ ಜಂಬೂ ಸವಾರಿ ಖ್ಯಾತಿ ಹೊಂದಿರುವ ತಾಲ್ಲೂಕಿನ ಹೇಮಗುಡ್ಡದಲ್ಲಿ ಅದ್ಧೂರಿ ಜಂಬೂಸವಾರಿ ನಡೆಯಿತು. ಇಲ್ಲಿನ ದುರ್ಗಾ ಪರಮೇಶ್ವರಿ ದೇಗುಲದ ಆವರಣದಲ್ಲಿ ಮಾಜಿ ಸಂಸದ ಎಚ್.ಜಿ. ರಾಮುಲು ಆನೆಗೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಅಲಂಕೃತ ಮಂಟಪದಲ್ಲಿ ದುರ್ಗಾಪರಮೇಶ್ವರಿಯನ್ನು ಹೊತ್ತ ಜಂಬೂ ಸವಾರಿ ನಡೆಯಿತು.
ದೇಗುಲದಿಂದ ಹೊರಟ ಜಂಬೂ ಸವಾರಿಯು, ಸುಮಾರು ಒಂದು ಕಿಲೋ ಮೀಟರ್ ದೂರ ಇರುವ ಹನುಮಂತ ದೇವರ ಪಾದಗಟ್ಟೆ ತಲುಪಿ ಪುನಃ ವಾಪಸ್ ದೇಗುಲಕ್ಕೆ ಅಗಮಿಸಿತು. ಜಂಬೂಸವಾರಿಯಲ್ಲಿ ನಾನಾ ವಾದ್ಯ ಮೇಳಗಳು ಕಣ್ಮನ ಸೆಳೆದವು.