ಕರ್ನಾಟಕ

karnataka

ETV Bharat / state

'ಲಕ್ಷ್ಯ' ಭೇದಿಸುವ ಗುರಿ: ದೊಡ್ಡ ದೊಡ್ಡ ಹಾಸ್ಪಿಟಲ್​ಗಳೊಂದಿಗೆ ಗಂಗಾವತಿ ಸರ್ಕಾರಿ ಆಸ್ಪತ್ರೆ ಪೈಪೋಟಿ - ಕೇಂದ್ರ ಸರ್ಕಾರದ ಕಾಯಕಲ್ಪ

ಇದೇ ಮೊಲದ ಬಾರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ 'ಲಕ್ಷ್ಯ' ಎಂಬ ಆರು ಲಕ್ಷ ಮೊತ್ತದ ನಗದು ಪ್ರಶಸ್ತಿಯ ಹೊಸ್ತಿಲಲ್ಲಿ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಿದೆ. ಪ್ರತಿಷ್ಠಿತ ಆಸ್ಪತ್ರೆಗಳಾದ ಬೆಂಗಳೂರಿನ ಕೆಪಿ, ಮಣಿಪಾಲ ಹಾಗೂ ಬೆಳಗಾವಿಯ ಸರ್ಕಾರಿ ಆಸ್ಪತ್ರೆಗಳ ಸಾಲಿನಲ್ಲಿ ಗಂಗಾವತಿಯ ಸರ್ಕಾರಿ ಆಸ್ಪತ್ರೆ ಕೂಡ ಪೈಪೋಟಿ ನೀಡುತ್ತಿದೆ.

'ಲಕ್ಷ್ಯ' ಬೇಧಿಸಲು ಶಾರ್ಪ್​ ಗುರಿಯಿಟ್ಟಿರುವ ಗಂಗಾವತಿ ಸರ್ಕಾರಿ ಆಸ್ಪತ್ರೆ

By

Published : Oct 16, 2019, 1:07 PM IST

Updated : Oct 16, 2019, 1:15 PM IST

ಗಂಗಾವತಿ: ರಾಜ್ಯದ 175 ತಾಲೂಕು ಆಸ್ಪತ್ರೆಗಳನ್ನು ಹಿಂದಿಕ್ಕಿ ಇತ್ತೀಚೆಗಷ್ಟೇ 15 ಲಕ್ಷ ರೂಪಾಯಿ ನಗದು ಪುರಸ್ಕಾರದೊಂದಿಗೆ ಕೇಂದ್ರ ಸರ್ಕಾರದ ಕಾಯಕಲ್ಪ 2018-19ನೇ ಸಾಲಿನ ಪ್ರಶಸ್ತಿ ಸ್ವೀಕರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ಗಂಗಾವತಿ ಸರ್ಕಾರಿ ಆಸ್ಪತ್ರೆ ಈಗ ಮತ್ತೊಂದು ಪ್ರತಿಷ್ಠಿತ ಪುರಸ್ಕಾರಕ್ಕೆ ಗುರಿ ಇಟ್ಟಿದೆ.

'ಲಕ್ಷ್ಯ' ಬೇಧಿಸಲು ಶಾರ್ಪ್​ ಗುರಿಯಿಟ್ಟಿರುವ ಗಂಗಾವತಿ ಸರ್ಕಾರಿ ಆಸ್ಪತ್ರೆ

ಇದೇ ಮೊಲದ ಬಾರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ 'ಲಕ್ಷ್ಯ' ಎಂಬ ಆರು ಲಕ್ಷ ಮೊತ್ತದ ನಗದು ಪ್ರಶಸ್ತಿಯ ಹೊಸ್ತಿಲಲ್ಲಿ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಿದೆ. ಪ್ರತಿಷ್ಠಿತ ಆಸ್ಪತ್ರೆಗಳಾದ ಬೆಂಗಳೂರಿನ ಕೆಪಿ, ಮಣಿಪಾಲ ಹಾಗೂ ಬೆಳಗಾವಿಯ ಸರ್ಕಾರಿ ಆಸ್ಪತ್ರೆಗಳ ಸಾಲಿನಲ್ಲಿ ಗಂಗಾವತಿಯ ಸರ್ಕಾರಿ ಆಸ್ಪತ್ರೆ ಕೂಡ ಪೈಪೋಟಿ ನೀಡುತ್ತಿದೆ.

ಕೇಂದ್ರ ಸರ್ಕಾರದ 'ಲಕ್ಷ್ಯ' ಪ್ರಶಸ್ತಿಗೆ ಭಾಜನವಾಗಬೇಕಾದರೆ ಕೆಲವು ಮಾನದಂಡಗಳಿವೆ. ಅವು ಆಸ್ಪತ್ರೆಯಲ್ಲಿನ ಸಹಜ, ಸಿಜಿರೀಯನ್ ಹೆರಿಗೆ, ಗರ್ಭಿಣಿಯರಿಗೆ ಸಿಗುವ ಸೌಲಭ್ಯ, ಆಪರೇಷನ್ ಥಿಯೇಟರ್ ಇಟ್ಟುಕೊಂಡಿರುವ ಸುಸ್ಥಿತಿ ಸೇರಿದಂತೆ ಮೊದಲಾದವುಗಳನ್ನು ಒಳಗೊಂಡಿರುತ್ತದೆ.

ಈಗಾಗಲೇ ಪಂಜಾಬ್​ನ ಫರೀದಾಬಾದಿನ ಜಿಜಿಎಸ್ ಮೆಡಿಕಲ್ ಕಾಲೇಜಿನ ಉಪ ಮೆಡಿಕಲ್ ಸೂಪರಿಂಡೆಂಟ್ ಡಾ. ರವೀಂದ್ರನಾಥ ಬನ್ಸಾಲ್, ಪುಣೆಯ ಜಿಲ್ಲಾ ಸರ್ಕಾರಿ ಕಾಲೇಜಿನ ಟ್ಯೂಟರ್ ಜ್ಯೋತಿ ಉಲ್ಲಾಸ್ ಲೊಂಡೆ ನೇತೃತ್ವದ ಪರಿಶೀಲನಾ ತಂಡ ಈ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದೆ. ಅಲ್ಲದೆ, ವರದಿಯನ್ನ ಕೇಂದ್ರಕ್ಕೆ ಸಲ್ಲಿಸಿದೆ ಎಂದು ತಿಳಿದುಬಂದಿದೆ.

Last Updated : Oct 16, 2019, 1:15 PM IST

ABOUT THE AUTHOR

...view details