ಗಂಗಾವತಿ:ಸರ್ಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗುತ್ತಿರುವುದನ್ನು ಮನಗಂಡ ಯುವ ಇಂಜಿನಿಯರ್ವೊಬ್ಬರು ತಾಲೂಕಿನ ನಾನಾ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳಿಗೆ ಸುಣ್ಣ ಬಣ್ಣ ಬಳಿದು ಗಮನ ಸೆಳೆಯುತ್ತಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್! - ಸರ್ಕಾರಿ ಶಾಲೆಗಳ ದತ್ತು
ಯುವ ಇಂಜಿನಿಯರ್ ಸಂಗಮೇಶ ಎಂಬುವವರು ಸುಗ್ರೀವಾ ಜನ ಸೇವಾ ಸಂಘ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಸಮಾನ ಮನಸ್ಕ ಯುವಕರೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದ್ದಾರೆ.
![ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್! Gangavathi](https://etvbharatimages.akamaized.net/etvbharat/prod-images/768-512-10556124-thumbnail-3x2-net.jpg)
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್
ನಗರದ ಯುವ ಇಂಜಿನಿಯರ್ ಸಂಗಮೇಶ ಎಂಬುವವರು ಸುಗ್ರೀವಾ ಜನ ಸೇವಾ ಸಂಘ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಸಮಾನ ಮನಸ್ಕ ಯುವಕರೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಸಂಗಮೇಶ, ಈ ಮೊದಲು ಬೇರೆ ಬೇರೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮೊದಲ ಬಾರಿಗೆ ಗಂಗಾವತಿ ತಾಲೂಕಿನಲ್ಲಿ ಈ ಕೆಲಸಕ್ಕೆ ಕೈಹಾಕಿದ್ದು, ಆನೆಗೊಂದಿ ಪ್ರೌಢ ಶಾಲೆಯನ್ನು ಮೊದಲಿಗೆ ಆಯ್ದುಕೊಳ್ಳಲಾಗಿದೆ ಎಂದರು.