ಕರ್ನಾಟಕ

karnataka

ETV Bharat / state

ಫುಟ್​​ಪಾತ್​​​​ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ - ಗಂಗಾವತಿ ಸಂಚಾರಿ ಡಿವೈಎಸ್ಪಿ ಚಂದ್ರಶೇಖರ್

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಾಚರಣೆಗೆ ಇಳಿದಿದ್ದರು.

ಫುಟ್ಪಾತ್ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ

By

Published : Oct 22, 2019, 5:56 PM IST

ಕೊಪ್ಪಳ: ಜನನಿಬಿಡ ಪ್ರದೇಶದಲ್ಲಿ ಜನ ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಸ್ವತಃ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಾಚರಣೆಗೆ ಇಳಿದಿದ್ದರು.

ಫುಟ್​​ಪಾತ್​ ತೆರವು ಕಾರ್ಯಾಚರಣೆಗಿಳಿದ ಗಂಗಾವತಿ ಡಿವೈಎಸ್ಪಿ

ನಗರದ ಮಹಾತ್ಮ ಗಾಂಧಿ ಹಾಗೂ ಮಹಾವವೀರ ವೃತ್ತದಲ್ಲಿ ಸಂಚಾರಿ ಪೊಲೀಸರ ಕರ್ತವ್ಯಕ್ಕೆ ಹಲವರು ಅಡ್ಡಿಪಡಿಸುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ, ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಫುಟ್​​ಪಾತ್​ ಆಕ್ರಮಿಸಿಕೊಂಡ ಕೆಲ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿರುವ ಕೆಲ ಗೂಡಂಗಡಿಗಳನ್ನು ತೆರವು ಮಾಡುವಂತೆ ಡಿವೈಎಸ್ಪಿ, ಸಂಚಾರಿ ಪಿಎಸ್ಐ ನಾಗರಾಜ್ ಸೂಚಿಸಿದ್ದಾರೆ.ಸಹಕಾರ ನೀಡದ ವ್ಯಾಪಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details