ಕರ್ನಾಟಕ

karnataka

By

Published : Mar 27, 2020, 11:43 PM IST

ETV Bharat / state

ಬಾಗಿಲು ಹಾಕಿದ ಅಂಜನಾದ್ರಿ: ಕೋತಿಗಳಿಗೆ ಕಂದಾಯ ಇಲಾಖೆಯಿಂದ ಆಹಾರ

ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾದ ಅಂಜನಾದ್ರಿ ದೇಗುಲದ ಬಾಗಿಲು ಹಾಕಿದ ಪರಿಣಾಮ ಕೋತಿಗಳಿಗೆ ತೀವ್ರ ಆಹಾರದ ಅಭಾವ ಉಂಟಾಗಿದ್ದು, ಮಂಗಗಳ ರಕ್ಷೆಣೆಗಾಗಿ ಕಂದಾಯ ಇಲಾಖೆ ಆಹಾರದ ವ್ಯವಸ್ಥೆ ಮಾಡುತ್ತಿದೆ.

gangavathi-department-of-revenue-providing-food-to-monkey
ಅಂಜನಾದ್ರಿ

ಗಂಗಾವತಿ: ಕೊರೊನಾ ಹರಡುವ ಭೀತಿಯಿಂದಾಗಿ ತಾಲೂಕಿನ ಪ್ರಮುಖ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾದ ಅಂಜನಾದ್ರಿ ದೇಗುಲದ ಬಾಗಿಲು ಹಾಕಿದ ಪರಿಣಾಮ ಕೋತಿಗಳಿಗೆ ತೀವ್ರ ಆಹಾರದ ಅಭಾವ ಏರ್ಪಟ್ಟಿದೆ. ಈ ಹಿನ್ನೆಲೆ ಕಂದಾಯ ಇಲಾಖೆ ಕೋತಿಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದೆ.

ಕೋತಿಗಳಿಗೆ ಕಂದಾಯ ಇಲಾಖೆಯಿಂದ ಆಹಾರ

ಈ ಹಿಂದೆ ಆಂಜನೇಯನ ದರ್ಶನಕ್ಕಾಗಿ ದೇಗುಲಕ್ಕೆ ನಿತ್ಯ ಸಾವಿರಾರು ಜನ ಬರುತ್ತಿದ್ದರು. ಬಂದ ಭಕ್ತರು ಕೋತಿಗಳಿಗೆ ಚೂರುಪಾರು ಹಣ್ಣು, ಕಾಯಿಗಳನ್ನು ನೀಡಿ ತೆರಳುತ್ತಿದ್ದರು. ಭಕ್ತರು ನೀಡಿದ ಆಹಾರದಿಂದಲೇ ಕೋತಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು. ಆದರೆ ಕಳೆದ ಎರಡು ವಾರದಿಂದ ಕೊರೊನಾದ ಭೀತಿಯಿಂದಾಗಿ ಸರ್ಕಾರ ಎಲ್ಲಾ ಸಾರ್ವಜನಿಕ ದೇಗುಲಗಳನ್ನು ಬಂದ್ ಮಾಡಿದ ಪರಿಣಾಮ ಬೆಟ್ಟಕ್ಕೆ ಬರುವ ಭಕ್ತರ ಸಂಖ್ಯೆ ಸಂಪೂರ್ಣ ಸ್ಥಗಿತವಾಗಿದೆ.

ಹೀಗಾಗಿ ಕೋತಿಗಳಿಗೆ ಆಹಾರದ ಸಮಸ್ಯೆ ಏರ್ಪಟ್ಟಿತ್ತು. ಸದ್ಯ ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್ ಅವರ ವಿಶೇಷ ಆಸಕ್ತಿಯಿಂದಾಗಿ ಇದೀಗ ಕಂದಾಯ ಇಲಾಖೆ ಕೋತಿಗಳಿಗೆ ಆಹಾರ ಸರಬರಾಜು ಮಾಡುತ್ತಿದೆ.

ABOUT THE AUTHOR

...view details