ಕರ್ನಾಟಕ

karnataka

ETV Bharat / state

ಹೈದ್ರಾಬಾದ್​ಗೆ ಏರ್ ಲಿಫ್ಟ್ ಮಾಡಲಾದ ಕೋವಿಡ್​ ಸೋಂಕಿತ ತಜ್ಞ ವೈದ್ಯನ ಸ್ಥಿತಿ ಗಂಭೀರ - ಗಂಗಾವತಿ ವೈದ್ಯನಾರೋಗ್ಯ ಸ್ಥಿತಿ ಗಂಭೀರ

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ವೈದ್ಯರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ಸಹೋದ್ಯೋಗಿಗಳು, ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿಸಿದ್ದರು.

Gangavathi Covid infected doctor Condition is Critical
ಕೋವಿಡ್​ ಸೋಂಕಿತ ತಜ್ಞ ವೈದ್ಯನ ಸ್ಥಿತಿ ಗಂಭೀರ

By

Published : Aug 24, 2020, 2:21 PM IST

ಗಂಗಾವತಿ :ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ಗೆ ಏರ್​ ಲಿಫ್ಟ್ ಮಾಡಲಾಗಿರುವ ಕೋವಿಡ್ ಸೋಂಕಿತ ನಗರದ ತಜ್ಞ ವೈದ್ಯರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ನಗರದ ಕಿವಿ, ಮೂಗು ಮತ್ತು ಗಂಟಲು ತಜ್ಞರೊಬ್ಬರು ಕಳೆದ ಮೂರು ವಾರಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆರಂಭದಲ್ಲಿ ನಾಲ್ಕೈದು ದಿನ ಮನೆಯಲ್ಲಿಯೇ ಹೋಂ ಐಸೋಲೇಷನ್ ಚಿಕಿತ್ಸೆ ಪಡೆದಿದ್ದ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಒಂದು ವಾರ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ಸಹೋದ್ಯೋಗಿಗಳು, ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿಸಿದ್ದರು. ಸದ್ಯ, ಹೈದರಾಬಾದ್​ನ ಆಸ್ಪತ್ರೆಯಲ್ಲಿರುವ ವೈದ್ಯರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ತಿಳಿದು ಬಂದಿದೆ.

ವೈದ್ಯರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹಬ್ಬಿಸಲಾಗುತ್ತಿದೆ. ಇವುಗಳಿಗೆ ಯಾರೂ ಕಿವಿಗೊಡಬಾರದು ಎಂದು ಐಎಂಎ ಪದಾಧಿಕಾರಿಗಳಾದ ಕೆ. ಅಮರೇಶ ಹಾಗೂ ಎಸ್. ಬಸವರಾಜ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details