ಗಂಗಾವತಿ:ನಗರಸಭೆಯ ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರದ ಬಗ್ಗೆ ರಿಯಾಲಿಟಿ ಚೆಕ್ ಮಾಡುವ ಉದ್ದೇಶದಿಂದ ಪೌರಾಯುಕ್ತ ಅರವಿಂದ್ ಜಮಖಂಡಿ ದಿಢೀರ್ ಭೇಟಿ ನೀಡಿ ತಾವೂ ಉಪಹಾರ ಸೇವಿಸಿದ್ದಾರೆ.
ಆಹಾರದ ಗುಣಮಟ್ಟ ಪರಿಶೀಲಿಸಲು ದಿಢೀರ್ ರಿಯಾಲಿಟಿ ಚೆಕ್ಗೆ ಮುಂದಾದ ಪೌರಾಯುಕ್ತ - gangavathi commissioner had sanitisation workers food
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರಸಭೆಯ ಪೌರಕಾರ್ಮಿಕರಿಗೆ ನೀಡುವ ಬೆಳಗಿನ ಆಹಾರದ ಬಗ್ಗೆ ನೌಕರರಿಂದ ಅಸಮಾಧಾನ ವ್ಯಕ್ತವಾದ ಹಿನ್ನೆಲೆ ಖುದ್ದು ಪೌರಾಯುಕ್ತರೇ ಆ ಉಪಹಾರ ಸೇವಿಸುವ ಮೂಲಕ ಕ್ವಾಲಿಟಿ ಚೆಕ್ ಮಾಡಿದ್ದಾರೆ.

ನಗರಸಭೆಯ ಪೌರ ನೌಕರರಿಗೆ ಉಪಹಾರ
ನಗರಸಭೆಯ ಪೌರಕಾರ್ಮಿಕರಿಗೆ ಉಪಹಾರ
ನಗರಸಭೆಯ 158 ಪೌರಕಾರ್ಮಿಕರಿಗೆ ನಿತ್ಯ ಬೆಳಗ್ಗೆ ಉಪಹಾರ ನೀಡಲಾಗುತ್ತಿದೆ. ನಗರಸಭೆಯ ಈ ಉಪಹಾರ ಪೂರೈಸುವ ಕಾಮಗಾರಿಯನ್ನು ಖಾಸಗಿ ಸಂಸ್ಥೆಯೊಂದು ವಹಿಸಿಕೊಂಡಿದ್ದು, ಕಳೆದ ಕೆಲ ದಿನಗಳ ಹಿಂದೆ ಗುಣಮಟ್ಟದ ಬಗ್ಗೆ ಪೌರಕಾರ್ಮಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು.
ಈ ಹಿನ್ನೆಲೆ ಸ್ವತಃ ಪೌರಾಯುಕ್ತರೇ ಫೀಲ್ಡಿಗಿಳಿದು, ಉಪಹಾರದ ಗುಣಮಟ್ಟ ಪರೀಕ್ಷಿಸಿದರು. ಮಕ್ಕಳ ಉದ್ಯಾನವನ, ನೆಹರು ಪಾರ್ಕ್, ಗುಂಡಮ್ಮ ಕ್ಯಾಂಪ್ ಸೇರಿದಂತೆ ಒಟ್ಟು ಐದು ಕಡೆ ಉಪಹಾರ ವಿತರಿಸಲಾಗುತ್ತಿದ್ದು, ಎರಡು ಸ್ಥಳಗಳಿಗೆ ಭೇಟಿ ನೀಡಿದ ಪೌರಾಯುಕ್ತ ಆಹಾರ ಸೇವಿಸಿ ಗುಣಮಟ್ಟ ಪರೀಕ್ಷಿಸಿದರು.