ಕರ್ನಾಟಕ

karnataka

ETV Bharat / state

'50 ಕೋವಿಡ್ ರೋಗಿಗಳ ಸಿಟಿ ಸ್ಕ್ಯಾನ್​ ವೆಚ್ಚಕ್ಕೆ ದೇಣಿಗೆ ನೀಡಿದ ಉದ್ಯಮಿ'

ಉದ್ಯಮಿ ಕೆ. ಕಾಳಪ್ಪ ಎಂಬುವವರು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ 50 ಮಂದಿ ಬಡ ಸೋಂಕಿತರಿಗೆ ಸಿಟಿ ಸ್ಕ್ಯಾನ್ ಮಾಡಿಸಲು ತಗಲುವ ಸುಮಾರು 4 ರಿಂದ 5 ಸಾವಿರ ಮೊತ್ತದಂತೆ ಹಣ ಪಾವತಿಸಲು ಮುಂದಾಗಿದ್ದಾರೆ.

Gangavathi
ಕೋವಿಡ್ ರೋಗಿಗಳ ಸಿಟಿ ಸ್ಕ್ಯಾನ್​ ವೆಚ್ಚಕ್ಕೆ ದೇಣಿಗೆ ನೀಡಿದ ಉದ್ಯಮಿ

By

Published : May 5, 2021, 2:35 PM IST

ಗಂಗಾವತಿ:ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ 50 ಮಂದಿ ಬಡ ಕೋವಿಡ್ ರೋಗಿಗಳ ಚಿಕಿತ್ಸೆಗೆ ನೆರವಾಗಲು ದಾನಿಯೊಬ್ಬರು ಮುಂದಾಗಿದ್ದಾರೆ.

ಕೋವಿಡ್ ರೋಗಿಗಳ ಸಿಟಿ ಸ್ಕ್ಯಾನ್​ ವೆಚ್ಚಕ್ಕೆ ದೇಣಿಗೆ ನೀಡಿದ ಉದ್ಯಮಿ

ನಗರದ ಉದ್ಯಮಿ ಕೆ. ಕಾಳಪ್ಪ ಎಂಬುವವರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವ ಬಡ ಸೋಂಕಿತರಿಗೆ ಸಿಟಿ ಸ್ಕ್ಯಾನ್ ಮಾಡಿಸಲು ತಗಲುವ ಸುಮಾರು 4 ರಿಂದ 5 ಸಾವಿರ ಮೊತ್ತದಂತೆ ಹಣ ಪಾವತಿಗೆ ಮುಂದಾಗಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ನೀಡುವುದಾಗಿ ಅವರು ಘೋಷಿಸಿದ್ದಾರೆ.

ಉದ್ಯಮಿಯ ಸಹಾಯ ಹಸ್ತದ ಹಿನ್ನೆಲೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಈಶ್ವರ ಸವಡಿ ಹಾಗೂ ತಹಶೀಲ್ದಾರ್ ನಾಗರಾಜ್ ಅಭಿನಂದಿಸಿದ್ದಾರೆ.

ABOUT THE AUTHOR

...view details