ಕರ್ನಾಟಕ

karnataka

ETV Bharat / state

ಗಂಗಾವತಿ ಕೃಷಿ ಕಾಲೇಜು ಆರಂಭ: ಮೊದಲ ದಿನ 24 ವಿದ್ಯಾರ್ಥಿಗಳು ಹಾಜರು - Gangavathi Agricultural College class start

ಇಂದು ಗಂಗಾವತಿ ತಾಲೂಕಿನ ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ತರಗತಿಗಳನ್ನು ಆರಂಭಿಸುವ ಮೂಲಕ ಅಧಿಕೃತವಾಗಿ ಕೃಷಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಯಿತು.

ಗಂಗಾವತಿ ಕೃಷಿ ಕಾಲೇಜು
ಗಂಗಾವತಿ ಕೃಷಿ ಕಾಲೇಜು

By

Published : Feb 15, 2021, 7:24 PM IST

ಗಂಗಾವತಿ: ರಾಜ್ಯದ ಭತ್ತದ ಕಣಜವೆಂದೇ ಹೆಸರಾದ ಗಂಗಾವತಿ ತಾಲೂಕಿನ ಕೃಷಿ ಕಾಲೇಜಿನ ಕನಸು ಕೊನೆಗೂ ಈಡೇರಿದ್ದು, ಇಂದು ಇಲ್ಲಿನ ಕೃಷಿ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ತರಗತಿಗಳನ್ನು ಆರಂಭಿಸುವ ಮೂಲಕ ಅಧಿಕೃತವಾಗಿ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಯಿತು.

ಗಂಗಾವತಿ ತಾಲೂಕಿನ ಕೃಷಿ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭ

ಕೆವಿಕೆಯ ಆವರಣದಲ್ಲಿ ತಾತ್ಕಾಲಿಕವಾಗಿ ತರಗತಿಗಳನ್ನು ಆರಂಭಿಸಲಾಗಿದ್ದು, ಸ್ಥಳಕ್ಕೆ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜು ಆರಂಭದಲ್ಲಿ ಕೊಂಚ ಸಮಸ್ಯೆಗಳು ಇರುತ್ತವೆ. ಇದನ್ನು ಮುಖ್ಯಸ್ಥರ ಗಮನಕ್ಕೆ ತಂದು ಸರಿಪಡಿಸಿಕೊಳ್ಳಿ, ಇಲ್ಲವೇ ನನ್ನ ಗಮನಕ್ಕೆ ತನ್ನಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಳಿಕ ಮಾತನಾಡಿದ ಕೃಷಿ ಕಾಲೇಜಿನ ಮುಖ್ಯಸ್ಥ ಮಸ್ತಾನ ರೆಡ್ಡಿ, ಗಂಗಾವತಿಯ ಬಿಎಸ್​ಸಿ ಮೊದಲ ವರ್ಷದ ಅಗ್ರಿ ಪದವಿ ತರಗತಿಗೆ ಒಟ್ಟು 37 ವಿದ್ಯಾರ್ಥಿಗಳ ಹೆಸರು ಮಂಜೂರಾಗಿತ್ತು. ಈ ಪೈಕಿ ಮೂರು ಮಕ್ಕಳು ವೈಯಕ್ತಿಕ ಕಾರಣಕ್ಕೆ ಸೀಟ್ ರದ್ದು ಮಾಡಿಸಿಕೊಂಡಿದ್ದಾರೆ. ಐದು ವಿದೇಶಿ ವಿದ್ಯಾರ್ಥಿಗಳು ಸೇರಿ ಸ್ಥಳೀಯ 24 ಮಕ್ಕಳು ಮುಂದಿನ ದಿನಗಳಲ್ಲಿ ನಿತ್ಯ ಕಾಲೇಜಿಗೆ ಬರುವ ವಿಶ್ವಾಸವಿದೆ. ಮೊದಲ ದಿನ ಕಾಲೇಜಿಗೆ 11 ಜನ ಹುಡುಗರು, 18 ಜನ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಹೇಳಿದರು.

ABOUT THE AUTHOR

...view details