ಕರ್ನಾಟಕ

karnataka

ETV Bharat / state

ಹಲವು ಕುಟುಂಬಗಳಲ್ಲಿ ಹುಳಿ ಹಿಂಡಿದ್ದ ಆರೋಪಿ ಆತ್ಮಹತ್ಯೆ: ಗಂಗಾ ಕುಲಕರ್ಣಿ ವಂಚನೆಗೆ ಪೂರ್ಣ ವಿರಾಮ!

2017ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕ್ಯಾದಿಗುಪ್ಪಾ ಗ್ರಾಮದ ಸಂತೋಷ್ ಎಂಬುವವರು ಗಂಗಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಈ ವಿಚಾರವಾಗಿ ವಕೀಲರನ್ನು ಭೇಟಿಯಾಗಲು ಬಂದ ಗಂಗಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ganga-kulkarni-death-allegations-of-fraud-news
ವಂಚನೆ ಪ್ರಕರಣದ ಆರೋಪ ಎದುರಿಸುತ್ತಿದ್ದ ಗಂಗಾ ಕುಲಕರ್ಣಿ...

By

Published : Oct 29, 2020, 5:40 PM IST

Updated : Oct 29, 2020, 7:50 PM IST

ಕೊಪ್ಪಳ:ಚಿತ್ರ ಸಾಹಿತಿ ಕೆ. ಕಲ್ಯಾಣ್ ದಾಂಪತ್ಯದ ಬಿರುಕಿಗೆ ಕಾರಣವಾಗಿದ್ದಳು ಎಂಬ ಆರೋಪ ಹೊತ್ತಿದ್ದ ಗಂಗಾ ಕುಲಕರ್ಣಿ ಅಲಿಯಾಸ್ ಜ್ಯೋತಿ ಕುಲಕರ್ಣಿ, ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ಇಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡಿದ್ದಾರೆ.

ನೌಕರಿ ಕೊಡಿಸುವುದಾಗಿ ಹೇಳಿ ಹಲವು ಜನರಿಗೆ ಮೋಸ ಮಾಡಿರುವ ಆರೋಪ ಇವರ ಮೇಲಿದ್ದು, 2017 ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕ್ಯಾದಿಗುಪ್ಪ ಗ್ರಾಮದ ಸಂತೋಷ್ ಎಂಬುವರು ಗಂಗಾ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನವೆಂಬರ್ 3 ರಂದು ನಿಗದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಗಂಗಾ ಕುಲಕರ್ಣಿ ನ್ಯಾಯವಾದಿಗಳನ್ನು ಭೇಟಿಯಾಗಲು ಕುಷ್ಟಗಿಗೆ ಬಂದಿದ್ದಳಂತೆ. ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.

ತೀವ್ರ ಅಸ್ವಸ್ಥಗೊಂಡಿದ್ದ ಗಂಗಾಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದಳು. ಇನ್ನು ಆತ್ಮಹತ್ಯೆಗೂ ಮುನ್ನ ಗಂಗಾ ಮರಾಠಿಯಲ್ಲಿ ಎರಡು ಪುಟ ಡೆತ್ ನೋಟ್ ಬರೆದಿದ್ದಾಳೆ. ತನ್ನ ಎರಡು ಮಕ್ಕಳ ಬದುಕನ್ನು ಸ್ಮರಿಸಿಕೊಂಡಿದ್ದಾಳೆ. ಅಲ್ಲದೇ ತನ್ನ ಕರ್ಮಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗಂಗಾ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ.

ಇನ್ನು ನೌಕರಿ ಕೊಡಿಸುವ ಆಮಿಷಕ್ಕೆ ಬಲಿಯಾಗಿ ಹಣ ಕಳೆದುಕೊಂಡಿದ್ದ ಕ್ಯಾದಿಗುಪ್ಪ ಗ್ರಾಮದ ಸಂತೋಷ್, ಪ್ರಕರಣ ನ್ಯಾಯಾಲಯದಲ್ಲಿದ್ದು ನನಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ. ಆದರೆ, ವಂಚನೆ ಮಾಡುವ ಕಾಯಕದಲ್ಲಿ ಗಂಗಾ ಕುಲಕರ್ಣಿಯ ದುರಂತ ಅಂತ್ಯವಾಗಿದೆ.

Last Updated : Oct 29, 2020, 7:50 PM IST

ABOUT THE AUTHOR

...view details