ಕರ್ನಾಟಕ

karnataka

ETV Bharat / state

ಭತ್ತದ ನಾಡಲ್ಲಿ ಅದ್ಧೂರಿ ಗಣೇಶ ಶೋಭಾಯಾತ್ರೆ: ಡಿಜೆ ಸೌಂಡ್​​ಗೆ ಯುವಕರಿಂದ ಸಖತ್​ ಸ್ಟೆಪ್ - Gangavathi news

ಗಂಗಾವತಿಯ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ನಿಮಜ್ಜನ ಮೆರವಣಿಗೆ ಏಕಕಾಲಕ್ಕೆ ಗಣೇಶ ವೃತ್ತ ತಲುಪುತ್ತಿದ್ದಂತೆ ಎರಡು ಮೆರವಣಿಗೆಯ ಡಿಜೆ ಸೌಂಡ್​ಗೆ ಸಾವಿರಾರು ಯುವಕರು ನೃತ್ಯ ಮಾಡುತ್ತಿದ್ದರೆ, ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ಅವರಿಗೆ ಸಾಥ್​ ನೀಡಿದ್ರು.

ನಿಮಜ್ಜನಾ ಮೆರವಣಿಗೆ

By

Published : Sep 23, 2019, 10:58 AM IST

ಗಂಗಾವತಿ: ನಗರದ ವಿಜಯವೃಂದ ಮತ್ತು ಪ್ರಶಾಂತ ನಗರದ ಗಣೇಶನ ಶೋಭಾ ಯಾತ್ರೆ ಅದ್ಧೂರಿಯಾಗಿ ಜರುಗಿತು. ಮೆರವಣಿಗೆಯ ಡಿ ಜೆ ಶಬ್ದಕ್ಕೆ ಮಲಗಿದ್ದವರು ಎದ್ದು ಬಂದು ಹೆಜ್ಜೆ ಹಾಕಿದರು.

ಭತ್ತದ ನಾಡಲ್ಲಿ ಅದ್ಧೂರಿ ಗಣೇಶ ಶೋಭಾಯಾತ್ರೆ

ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿಜಯವೃಂದ ಹಾಗೂ ಪ್ರಶಾಂತ ನಗರದ ಗಣೇಶನ ನಿಮಜ್ಜನ ಮೆರವಣಿಗೆ ಏಕಕಾಲಕ್ಕೆ ಗಣೇಶ ವೃತ್ತ ತಲುಪುತ್ತಿದ್ದಂತೆ ಎರಡು ಮೆರವಣಿಗೆಯ ಡಿಜೆ ಸೌಂಡ್​ಗೆ ಸಾವಿರಾರು ಯುವಕರು ನೃತ್ಯ ಮಾಡುತ್ತಿದ್ದರೆ, ಮನೆಯಲ್ಲಿ ಮಲಗಿದ್ದ ಯುವಕರು ಓಡೋಡಿ ಬಂದು ನೃತ್ಯಕ್ಕೆ ಸಾಥ್​ ನೀಡಿದ್ದು ವಿಶೇಷವಾಗಿತ್ತು. ಗಸ್ತಿಗೆ ನಿಯೋಜಿತರಾಗಿದ್ದ ಪೊಲೀಸರು ಯುವಪಡೆ ನಿಯಂತ್ರಿಸುವಲ್ಲಿ ಹೈರಾಣಾದರು.

ABOUT THE AUTHOR

...view details