ಕುಷ್ಟಗಿ (ಕೊಪ್ಪಳ): ಮಹಾತ್ಮ ಗಾಂಧೀಜಿಯವರ 151ನೇ ಮತ್ತು ಮಾಜಿ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಪ್ರಯುಕ್ತ, ಬಿಜೆಪಿ ಯುವ ಮೋರ್ಚಾದ ನೇತೃತ್ವದಲ್ಲಿ ಚರಂಡಿ ನೀರಿನಿಂದ ಕೊಚ್ಚೆಯಾಗಿದ್ದ ರಸ್ತೆಗೆ ಕಾಯಕಲ್ಪ ನೀಡುವ ಮೂಲಕ ಇಬ್ಬರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ರಸ್ತೆ ಅಭಿವೃದ್ಧಿ ಮೂಲಕ ಕುಷ್ಟಗಿಯಲ್ಲಿ ಗಾಂಧಿ ಜಯಂತಿ ಆಚರಣೆ - ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಉಮೇಶ ಯಾದವ್
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಮಹಿಳಾ ಕಾಲೇಜಿನ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ರಸ್ತೆಯಲ್ಲಿ ಚರಂಡಿ ನೀರು ಹರಿದು ಸಂಚರಿಸದಷ್ಟು ಹದಗೆಟ್ಟಿತ್ತು ಎಂದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಉಮೇಶ ಯಾದವ್ ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಉಮೇಶ ಯಾದವ್ ಅವರು ಪ್ರತಿಕ್ರಿಯಿಸಿ, ಮಹಾತ್ಮಗಾಂಧೀಜಿ ಹಾಗೂ ಲಾಲ್ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆಯಲ್ಲಿ ಮಹಿಳಾ ಕಾಲೇಜಿನ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ರಸ್ತೆಯಲ್ಲಿ ಚರಂಡಿ ನೀರು ಹರಿದು ಸಂಚರಿಸದಷ್ಟು ಹದಗೆಟ್ಟಿತ್ತು. ಹೀಗಾಗಿ ಜೆಸಿಬಿ ಸಹಾಯದಿಂದ ರಸ್ತೆಯ ಮೇಲಿನ ಕೊಳಚೆಯನ್ನು ತೆರವು ಮಾಡಿಸಲಾಗಿದೆ ಎಂದರು.
ಈ ರಸ್ತೆಯಲ್ಲಿ ಚರಂಡಿ ನೀರು ಹರಿಯದಂತೆ ಚರಂಡಿಯಲ್ಲಿನ ತ್ಯಾಜ್ಯದ ಹೂಳು ಪುರಸಭೆಯವರ ಸಹಾಯದಿಂದ ತೆರವುಗೊಳಿಸಲಾಗಿದೆ. ಬರೀ ಭಾವಚಿತ್ರವಿಟ್ಟು ಮಹನೀಯರನ್ನು ಭಾವಚಿತ್ರ ಪೂಜೆಗೆ ಸೀಮಿತಗೊಳಿಸದೇ, ಈ ಕೆಲಸ ನಿರ್ವಹಿಸುವ ಮೂಲಕ ಜಯಂತಿ ಆಚರಿಸಿದ್ದೇವೆ. ಚರಂಡಿಯಲ್ಲಿ ತ್ಯಾಜ್ಯದ ಹೂಳು ತೆಗೆಯಲು ಪುರಸಭೆ ಸಿಬ್ಬಂದಿ ಕೈ ಜೋಡಿಸಿದ್ದಾರೆ ಎಂದರು.