ಕೊಪ್ಪಳ : ಜಿಲ್ಲೆಯ ಕುಷ್ಠಗಿ ತಾಲೂಕಿನ ಕೆ.ಬೋದೂರು ತಾಂಡಾ ಸೇರಿದಂತೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿ ಮಳೆಗೆ ಟೋಲ್‌ಗೇಟ್‌ನ ತಗಡಿನ ಶೀಟ್‌ಗಳೇ ಕಿತ್ತುಹೋಗಿದ್ದು ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.
ಬಿರುಗಾಳಿ ಸಹಿತ ಮಳೆಗೆ ಟೋಲ್‌ಗೇಟ್‌ಗಳೇ ಕಿತ್ಹೋದವು.. ಸುಂಕ ವಸೂಲಿ ಮಾತ್ರ ಬಿಡಲಿಲ್ಲ - kannada news
ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪಥ ರಸ್ತೆಯಲ್ಲಿರುವ ಟೋಲ್ ಗೇಟ್‌ನ ತಗಡು ಮತ್ತು ಗೇಟ್‌ಗಳು ಭಾರಿ ಗಾಳಿ ಮಳೆಗೆ ಕಿತ್ತುಹೋಗಿವೆ.
ಭಾರಿ ಗಾಳಿ ಮಳೆಗೆ ಟೋಲ್ ಗೇಟ್ ತಗಡಿನ ಶಿಟ್‌ಗಳು ಕಿತ್ತುಹೋಗಿವೆ
ಜಿಲ್ಲೆಯ ಕೆ. ಬೋದೂರು ತಾಂಡಾ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಚತುಷ್ಪಥ ರಸ್ತೆಯಲ್ಲಿರುವ ಟೋಲ್‌ಗೇಟ್‌ನ ತಗಡು ಮತ್ತು ಗೇಟ್‌ಗಳು ಭಾರಿ ಗಾಳಿ ಮಳೆಗೆ ಕಿತ್ತುಹೋಗಿದ್ದು, ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಸ್ವತಃ ಬಸ್ ನಿರ್ವಾಹಕರು ಹಾಗೂ ಪ್ಯಾಸೆಂಜರ್ ಸೇರಿ ದಾರಿ ಸುಗಮ ಮಾಡಿಕೊಂಡರು. ಇಂತಹ ಪರಿಸ್ಥಿತಿಯಲ್ಲಿಯೂ ಸಹ ಟೋಲ್ ಸಿಬ್ಬಂದಿ ವಾಹನಗಳ ಸವಾರರಿಂದ ಸುಂಕ ವಸೂಲಿ ಮಾಡಿದ್ದು ಪ್ರಯಾಣಿಕರು ಅಸಮಧಾನಕ್ಕೂ ಕಾರಣವಾಯಿತು. ಸ್ಥಳಕ್ಕೆ ಕುಷ್ಠಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.