ಗಂಗಾವತಿ(ಕೊಪ್ಪಳ):ನಿಗದಿತ ಅವಧಿಗೂ ಮೊದಲೇ ಮಾಜಿ ಸಚಿವ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಗಂಗಾವತಿ ವಾಸ್ತವ್ಯದ ಮನೆಯ ಗೃಹ ಪ್ರವೇಶ ನೆರವೇರುತ್ತಿದೆ. ಡಿ.18ರಂದು ಗಂಗಾವತಿಯ ಗೃಹ ಪ್ರವೇಶ ಇರಲಿದ್ದು ಅಂದೇ ನನ್ನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಅಧಿಕೃತ ಮಾಹಿತಿ ನೀಡುವುದಾಗಿ ಜನಾರ್ದನ ರೆಡ್ಡಿ ಹೇಳಿದ್ದರು.
ಆದರೆ ರೆಡ್ಡಿ ನಿಗದಿಪಡಿಸಿದ್ದ ಅವಧಿಗಿಂತ ನಾಲ್ಕು ದಿನ ಮುಂಚಿತ ಅಂದರೆ ಇಂದು(ಡಿ.14) ಮನೆಯ ಗೃಹವಪ್ರವೇಶವನ್ನು ಸರಳವಾಗಿ ನೆರವೇರಿಸಿದ್ದಾರೆ. ರೆಡ್ಡಿ ಅವರ ಪತ್ನಿ ಅರುಣಾ ಅವರ ನೇತೃತ್ವದಲ್ಲಿ ಬಳ್ಳಾರಿಯಿಂದ ಅರ್ಚಕರನ್ನು ಕರೆಸಿ ಗೃಹ ಪ್ರವೇಶದ ಹೋಮ ಹವನ ಶಾಸ್ತ್ರೋಕ್ತ ಕಾರ್ಯಕ್ರಮ ಜರುಗಿಸಲಾಗಿದೆ. ರೆಡ್ಡಿ ಪತ್ನಿ ಅರುಣಾ ಅವರು ಪೂಜೆ ನೆರವೇರಿಸುವ ಫೋಟೋಗಳು ಲಭ್ಯವಾಗಿದೆ.