ಕರ್ನಾಟಕ

karnataka

ETV Bharat / state

ಭಾನುವಾರ ಸಂಪೂರ್ಣ ಲಾಕ್​​ಡೌನ್: ನಿಯಮ ಮೀರಿದರೆ ಕಾನೂನು ಕ್ರಮ - ಲಾಕ್ ಡೌನ್

ಮೇ 31ರವರೆಗೆ ಲಾಕ್​​ಡೌನ್ ಮುಂದುವರಿಸಿ ಸರ್ಕಾರ ಆದೇಶ‌ ಮಾಡಿದೆ. ಈ ಅವಧಿಯಲ್ಲಿ ಎಲ್ಲಾ ದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಎಲ್ಲಾ ಚಟುವಟಿಕೆಗಳು ಹಾಗೂ ಜನರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕೊಪ್ಪಳ ಡಿಸಿ ಆದೇಶ ಹೊರಡಿಸಿದ್ದಾರೆ.

Full lockdown on Sunday
ಭಾನುವಾರ ಸಂಪೂರ್ಣ ಲಾಕ್ ಡೌನ್ : ನಿಯಮ ಮೀರಿದರೆ ಕಾನೂನು ಕ್ರಮ ಎಂದು ಕೊಪ್ಪಳ ಡಿಸಿ

By

Published : May 20, 2020, 4:16 PM IST

ಕೊಪ್ಪಳ: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಾಲ್ಕನೇ ಹಂತದ ಲಾಕ್​ಡೌನ್ ಮುಂದುವರೆದಿದ್ದು, ಈ ಅವಧಿಯಲ್ಲಿ ಭಾನುವಾರ ಎಲ್ಲಾ ಚಟುವಟಿಕೆಗಳು ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ್ ಆದೇಶ ಹೊರಡಿಸಿದ್ದಾರೆ.

ಮೇ. 31ರವರೆಗೆ ಲಾಕ್​ಡೌನ್ ಮುಂದುವರೆಸಿ ಸರ್ಕಾರ ಆದೇಶ‌ ಮಾಡಿದೆ. ಈ ಅವಧಿಯಲ್ಲಿ ಎಲ್ಲಾ ದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಎಲ್ಲಾ ಚಟುವಟಿಕೆಗಳು ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಜೊತೆಗೆ ನಾಲ್ಕನೇ ಹಂತದ ಲಾಕ್​ಡೌನ್ ಅವಧಿಯಲ್ಲಿ ಬರುವ ಮೇ 24 ಮತ್ತು 31ರ ಭಾನುವಾರಗಳಂದು ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿದೆ. ಈ ದಿನಗಳಂದು ಎಲ್ಲಾ ಅನಗತ್ಯ ಚಟುವಟಿಕೆ ಹಾಗೂ ಜನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

144 ಸೆಕ್ಷನ್​ ಜಾರಿಯಲ್ಲಿರುವುದರಿಂದ ಸಂಪೂರ್ಣ ಲಾಕ್​ಡೌನ್ ದಿನವಾದ ಮೇ. 24 ಹಾಗೂ ಮೇ. 31ರ ಭಾನುವಾರ ಮದುವೆ ಕಾರ್ಯಕ್ರಮಗಳಿಗಾಗಿ ನೀಡಲಾಗಿರುವ ಎಲ್ಲಾ ಪರವಾನಗಿಗಳನ್ನು ರದ್ದುಪಡಿಸಲಾಗಿದೆ‌. ನಿಯಮ ಮೀರಿ ಮದುವೆ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details