ಕುಷ್ಟಗಿ :ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಸಕ್ರಿಯರಾಗಿದ್ದ ಶ್ಯಾಮವ್ವ ಶ್ಯಾಮಣ್ಣ ಗೋತಗಿ ಅವರು ಬುಧವಾರ ಮಧ್ಯಾಹ್ನ ಮದಲಗಟ್ಟೆ ಅವರ ತೋಟದ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ್ತಿ ಶ್ಯಾಮವ್ವ ಶ್ಯಾಮಣ್ಣ ಗೋತಗಿ ವಿಧಿವಶ - ಸ್ವಾತಂತ್ರ್ಯ ಹೋರಾಟಗಾರ್ತಿ ಶ್ಯಾಮವ್ವ ಶ್ಯಾಮಣ್ಣ ಗೋತಗಿ ವಿಧಿವಶ
ಸ್ವಾತಂತ್ರ್ಯ ಹೋರಾಟಗಾರ್ತಿ ಶ್ಯಾಮವ್ವ ಶ್ಯಾಮಣ್ಣ ಗೋತಗಿ ವಿಧಿವಶರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು..
ಸ್ವಾತಂತ್ರ್ಯ ಹೋರಾಟಗಾರ್ತಿ ಶ್ಯಾಮವ್ವ ಶ್ಯಾಮಣ್ಣ ಗೋತಗಿ ವಿಧಿವಶ
ಅವರಿಗೆ 99 ವರ್ಷ ವಯಸ್ಸಾಗಿತ್ತು. ಸ್ವಾತಂತ್ರ್ಯ ಸೇನಾನಿ ಶ್ಯಾಮಣ್ಣ ಗೋತಗಿ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ದೇಶ ಸೇವೆ ಸಲ್ಲಿಸಿದ್ದರು. ತಾಲೂಕಾಡಳಿತ ಗುರುವಾರ ದಿ. ಶ್ಯಾಮವ್ವ ಗೋತಗಿ ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಗೌರವ ಸಲ್ಲಿಸಲಿದೆ.
ಪುತ್ರ ಜಗನ್ನಾಥ ಗೋತಗಿ ಅವರ ಮದಲಗಟ್ಟೆ ತೋಟದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಶ್ಯಾಮವ್ವ ಅವರ ಹಿರಿಯ ಪುತ್ರ ನಿವೃತ್ತ ಶಿಕ್ಷಕ ಶುಕರಾಮಪ್ಪ ಗೋತಗಿ ತಿಳಿಸಿದ್ದಾರೆ.