ಗಂಗಾವತಿ (ಕೊಪ್ಪಳ):ತಾಲೂಕಿನ ಶ್ರೀರಾಮನಗರದ ಕೆಲ ಯುವಕರು ಕರ್ತವ್ಯ ನಿರತವಾಗಿದ್ದ ವಿವಿಧ ಇಲಾಖೆಯ ಸಿಬ್ಬಂದಿಗೆ ಸುಮಾರು 500 ಕೆಜಿ ತರಕಾರಿಯನ್ನು ಉಚಿತವಾಗಿ ವಿತರಿಸಿದರು.
ಕರ್ತವ್ಯ ನಿರತ ಸಿಬ್ಬಂದಿಗೆ ಉಚಿತ ತರಕಾರಿ ವಿತರಣೆ - ಕರ್ತವ್ಯ ನಿರತ ಸಿಬ್ಬಂದಿಗೆ ಉಚಿತ ತರಕಾರಿ ವಿತರಣೆ
ಕರ್ತವ್ಯ ನಿರತ ವಿವಿಧ ಇಲಾಖೆಯ ಸಿಬ್ಬಂದಿಗೆ ಉಚಿತವಾಗಿ ತರಕಾರಿ ವಿತರಿಸಲಾಯಿತು.

ಕರ್ತವ್ಯ ನಿರತ ಸಿಬ್ಬಂದಿಗೆ ಉಚಿತ ತರಕಾರಿ ವಿತರಣೆ
ಮರಳಿ ಹೋಬಳಿಯ ವಿವಿಧ ಗ್ರಾಮದ 21 ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿಯ ತಲಾ 15 ಸಿಬ್ಬಂದಿ ಸೇರಿದಂತೆ ಒಟ್ಟು 60 ಕ್ಕೂ ಹೆಚ್ಚು ಸಿಬ್ಬಂದಿಗೆ ಉಚಿತ ತರಕಾರಿ ನೀಡಿದರು. ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಒಟ್ಟು 500 ಕೆಜಿ ಪ್ರಮಾಣದ ತರಕಾರಿಗಳನ್ನು ವಿತರಿಸಿದರು.