ಕರ್ನಾಟಕ

karnataka

ETV Bharat / state

ವಿದ್ಯಾಗಮದಲ್ಲಿ ಪಠ್ಯ ಆಲಿಸುವ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ - Free Mask distrubtion

ವಿದ್ಯಾಗಮ ಯೋಜನೆಯಡಿ ಪಾಠಕ್ಕೆ ಬರುತ್ತಿರುವ ಮಕ್ಕಳಿಗೆ ಆನೆಗೊಂದಿ ಗ್ರಾಮದ ಯುವಕ ಪ್ರವೀಣ್ ಕುಮಾರ್, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಮಾಸ್ಕ್ ವಿತರಿಸಿದರು.

ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ
ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

By

Published : Sep 2, 2020, 11:02 PM IST

ಗಂಗಾವತಿ:ವಿದ್ಯಾಗಮ ಯೋಜನೆ ಅಡಿಯಲ್ಲಿ ಪಾಠ ಪ್ರವಚನದಲ್ಲಿ ತೊಡಗಿಕೊಳ್ಳುವ ಮಕ್ಕಳಿಗೆ ತಾಲೂಕಿನ ಆನೆಗೊಂದಿ ಗ್ರಾಮದ ಯುವಕ ಪ್ರವೀಣ್ ಕುಮಾರ್, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಉಚಿತ ಮಾಸ್ಕ್ ವಿತರಿಸಿದರು.

ವಿದ್ಯಾಗಮದಲ್ಲಿ ಪಠ್ಯ ಆಲಿಸುವ ಮಕ್ಕಳಿಗೆ ಉಚಿತ ಮಾಸ್ಕ್ ವಿತರಣೆ

ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನ, ಗಾಳೆಮ್ಮ ದೇಗುಲ, ಗೂಗಿಬಂಡಿ, ಚಿಕ್ಕರಾಂಪೂರ ಗ್ರಾಮ ಸೇರಿದಂತೆ ನಾನಾ ದೇಗುಲಗಳ ಆವರಣದಲ್ಲಿ ನಡೆಯುತ್ತಿರುವ ವಿದ್ಯಾಗಮ ಯೋಜನೆಯಲ್ಲಿ ಪಾಠ ಆಲಿಸುತ್ತಿರುವ ಸುಮಾರು 200 ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವಕ, ಶಾಲಾ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಯಾವುದೇ ಮಾಸ್ಕ್ ವಿತರಿಸುತ್ತಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಕಾಳಜಿಯಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

ABOUT THE AUTHOR

...view details