ಗಂಗಾವತಿ: ನಗರದ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ ಇದೇ ಶೈಕ್ಷಣಿಕ ವರ್ಷಕ್ಕೆ ಕೊಪ್ಪಳ ಜಿಲ್ಲೆಯ ಯಾವುದೇ ತಾಲ್ಲೂಕಿಗೆ ಸೇರಿದ ಐವತ್ತು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವಿಚೈತನ್ಯ ತಿಳಿಸಿದರು.
50 ಪ್ರತಿಭಾವಂತ ಬಡ ಮಕ್ಕಳಿಗೆ ಉಚಿತ ಶಿಕ್ಷಣ; ಗಂಗಾವತಿಯಲ್ಲೊಂದು ಮಾದರಿ ಕಾಲೇಜು - ಬಡ ಮಕ್ಕಳಿಗೆ ಉಚಿತ ಶಿಕ್ಷಣ
ಒಂದು ತಿಂಗಳಿಗೆ ಮುಗಿಯುವ ಆಹಾರದ ಬದಲಿಗೆ ಮಕ್ಕಳ ಜೀವನ ರೂಪಿಸಬಲ್ಲ, ಜೀವನ ಪರ್ಯಂತ ನೆರವು ನೀಡುವ ಶಿಕ್ಷಣ ಎಂಬ ಕಿಟ್ ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 80ರಷ್ಟು ಅಂಕಪಡೆದ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅದಕ್ಕಿಂತಲೂ ಕಡಿಮೆ ಅಂಕ ಪಡೆದುಕೊಂಡಿದ್ದರೆ, ಅವರ ಆರ್ಥಿಕ ಸಂಕಷ್ಟ ಗಮನಿಸಿ ಉಚಿತ ಸೀಟು ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದು ವೆಂಕಟೇಶ್ವರ ಪಿಯು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರವಿಚೈತನ್ಯ ಹೇಳಿದರು.
ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ ಅವರು, ಕಳೆದ ವರ್ಷದ ಕೊರೊನಾದ ಲಾಕ್ ಡೌನ್ ಹೊಡೆತದಿಂದ ಪಾಲಕರು ಇನ್ನೂ ಚೇತರಿಸಿಕೊಂಡಿಲ್ಲ. ಕಳೆದ ವರ್ಷ ಮಕ್ಕಳ ಕಾಲೇಜಿನ ಶುಲ್ಕ ಪಾವತಿಗೂ ಬಹುತೇಕ ಬಡ ಪಾಲಕರು ಪರದಾಡಿದ್ದಾರೆ. ಮತ್ತೀಗ ಎರಡನೇ ಅಲೆ ಹೊಡೆತಕ್ಕೆ ಬಹುತೇಕ ಬಡ ಪಾಲಕರು ತಮ್ಮ ಮಕ್ಕಳನ್ನು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಬಿಡಿಸುತ್ತಿರುವ ಘಟನೆಗಳು ನಮ್ಮ ಗಮನಕ್ಕೆ ಬಂದಿವೆ.
ಲಾಕ್ಡೌನ್ ಸಂಕಷ್ಟದಲ್ಲಿ ಉದ್ಯಮಿಗಳು, ಸಂಘ-ಸಂಸ್ಥೆಗಳು ಆಹಾರದ ಕಿಟ್ ನೀಡಿ ಜನರ ನೆರವಿಗೆ ಬಂದಿವೆ. ಆದರೆ ನಾವು ಒಂದುವಾರ, ಒಂದು ತಿಂಗಳಿಗೆ ಮುಗಿಯುವ ಆಹಾರದ ಬದಲಿಗೆ ಮಕ್ಕಳ ಜೀವನ ರೂಪಿಸಬಲ್ಲ, ಜೀವನ ಪರ್ಯಂತ ನೆರವು ನೀಡುವ ಶಿಕ್ಷಣ ಎಂಬ ಕಿಟ್ ಉಚಿತವಾಗಿ ನೀಡುತ್ತಿದ್ದೇವೆ. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 80ರಷ್ಟು ಅಂಕಪಡೆದ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅದಕ್ಕಿಂತಲೂ ಕಡಿಮೆ ಅಂಕ ಪಡೆದುಕೊಂಡಿದ್ದರೆ, ಅವರ ಆರ್ಥಿಕ ಸಂಕಷ್ಟ ಗಮನಿಸಿ ಉಚಿತ ಸೀಟು ನೀಡುವ ಬಗ್ಗೆ ಗಮನ ಹರಿಸಲಾಗುವುದು ಎಂದು ರವಿಚೈತನ್ಯ ಹೇಳಿದರು.