ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹುಚ್ಚು ನಾಯಿ ದಾಳಿಯಿಂದ ನಾಲ್ವರು ಗಾಯಗೊಂಡಿದ್ದಾರೆ.
ಹುಚ್ಚು ನಾಯಿ ದಾಳಿ: ನಾಲ್ವರಿಗೆ ಗಾಯ - Koppal latest news
ಹುಚ್ಚು ನಾಯಿ ದಾಳಿಗೆ ನಾಲ್ವರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.
![ಹುಚ್ಚು ನಾಯಿ ದಾಳಿ: ನಾಲ್ವರಿಗೆ ಗಾಯ Koppla](https://etvbharatimages.akamaized.net/etvbharat/prod-images/768-512-10:26:42:1596171402-kn-kpl-02-31-naayi-daali-photo-7202284-31072020101804-3107f-1596170884-79.jpg)
Koppla
ಕನಕಗಿರಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಇಬ್ಬರು ಮಕ್ಕಳು ಸೇರಿ ಗ್ರಾಮದ ನಾಲ್ಕು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಹುಚ್ಚು ನಾಯಿಯ ದಾಳಿ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದು, ನಾಯಿಯನ್ನು ಹಿಡಿಯಲು ಗ್ರಾಮಸ್ಥರು ನಿನ್ನೆ ರಾತ್ರಿ ಬಡಿಗೆಗಳನ್ನು ಹಿಡಿದು ಶೋಧ ನಡೆಸಿದ್ದರು.