ಕರ್ನಾಟಕ

karnataka

ETV Bharat / state

ನಾಲ್ವರು ಸೋಂಕಿನಿಂದ ಗುಣಮುಖ, ಕೊಪ್ಪಳ ಕೋವಿಡ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್ - Koppal Corona latest news

ನಗರದ ಕೋವಿಡ್-19 ಆಸ್ಪತ್ರೆಯಿಂದ ಮೂರು ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ‌. ಮೂರು ವರ್ಷದ ಮಗು (P- 7103), 29 ವರ್ಷದ ಮಹಿಳೆ (P-7453) ಹಾಗೂ (P-7451) ಪುರುಷ ಗುಣಮುಖರಾಗಿದ್ದಾರೆ..

Koppal
Koppal

By

Published : Jun 22, 2020, 3:32 PM IST

ಕೊಪ್ಪಳ :ಜಿಲ್ಲೆಯಲ್ಲಿ ಓರ್ವ ಕೊರೊನಾ ವಾರಿಯರ್ ಸೇರಿ ಇಂದು ಒಟ್ಟು ನಾಲ್ಕು ಜನ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಜೂನ್ 16ರಂದು ಸೋಂಕು ತಗುಲಿದ ಹಿನ್ನೆಲೆಯಲ್ಲಿ ಗಂಗಾವತಿಯ 30 ವರ್ಷದ ಸ್ಟಾಫ್‌ ನರ್ಸ್ (P-7452) ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ನಗರದ ಕೋವಿಡ್-19 ಆಸ್ಪತ್ರೆಯಿಂದ ಮೂರು ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ‌. ಮೂರು ವರ್ಷದ ಮಗು (P- 7103), 29 ವರ್ಷದ ಮಹಿಳೆ (P-7453) ಹಾಗೂ (P-7451) ಪುರುಷ ಗುಣಮುಖರಾಗಿದ್ದಾರೆ.

ಚಿಕಿತ್ಸೆ ಬಳಿಕ ಈ ನಾಲ್ವರ ಗಂಟಲು ದ್ರವ ಪರೀಕ್ಷೆ‌ ಮಾಡಿದಾಗ ನೆಗೆಟಿವ್ ಬಂದಿದೆ. ಆಸ್ಪತ್ರೆ‌ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು. ಜಿಲ್ಲೆಯಲ್ಲಿ ಒಟ್ಟು 29 ಜ‌ನ ಸೋಂಕಿತರ ಪೈಕಿ 16 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. 12 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details