ಕರ್ನಾಟಕ

karnataka

ETV Bharat / state

ಹರಿಹರ - ಕೂಡಲಸಂಗಮ ಪೀಠಗಳ ಹೋರಾಟದಿಂದ ನ್ಯಾಯ ಒದಗಿಸಲು ಸಾಧ್ಯ: ಮಾಜಿ ಸಂಸದ ಶಿವರಾಮಗೌಡ - Former MP shivaramegowda talk

ಕೇಂದ್ರ ಸರ್ಕಾರ ನಮ್ಮನ್ನು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಬೇಕು. ರಾಜ್ಯ ಸರ್ಕಾರ 2ಎ ವರ್ಗಕ್ಕೆ ಸೇರಿಸಬೇಕು. ಈ ಮೂಲಕ ಪಂಚಮಸಾಲಿ ಸಮುದಾಯವನ್ನು ಎಲ್ಲಾ ಆಯಾಮದಲ್ಲೂ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

former-mp-shivaramegowda-talk-about-harihara-kudalasanga-peetha
ಹರಿಹರ-ಕೂಡಲಸಂಗಮ ಪೀಠಗಳ ಹೋರಾಟ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯ: ಮಾಜಿ ಸಂಸದ ಶಿವರಾಮಗೌಡ

By

Published : Oct 23, 2020, 8:19 PM IST

ಗಂಗಾವತಿ:ಪಂಚಮಸಾಲಿ ಸಮಾಜದ ಹರಿಹರ ಮತ್ತು ಕೂಡಲಸಂಗಮ ಎರಡೂ ಪೀಠಗಳಿಂದ ಸಮನ್ವಯ ಹೋರಾಟ ಹಮ್ಮಿಕೊಂಡರೆ ಮಾತ್ರ ಸಮುದಾಯಕ್ಕೆ ಒಳಿತಾಗಲಿದೆ ಎಂದು ಮಾಜಿ ಸಂಸದ ಎಸ್. ಶಿವರಾಮಗೌಡ ಹೇಳಿದರು.

ಹರಿಹರ - ಕೂಡಲಸಂಗಮ ಪೀಠಗಳ ಹೋರಾಟ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯ: ಮಾಜಿ ಸಂಸದ ಶಿವರಾಮಗೌಡ

ನಗರದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿ, ಎರಡೂ ಪೀಠಗಳ ಶ್ರೀಗಳು ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂಬ ಕಾರಣಕ್ಕೆ ಶಕ್ತಿ ಮೀರಿ ಯತ್ನ ಮಾಡುತ್ತಿವೆ.

ಕೇಂದ್ರ ಸರ್ಕಾರ ನಮ್ಮನ್ನು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಬೇಕು, ರಾಜ್ಯ ಸರ್ಕಾರ 2ಎ ವರ್ಗಕ್ಕೆ ಸೇರಿಸಬೇಕು. ಈ ಮೂಲಕ ಪಂಚಮಸಾಲಿ ಸಮುದಾಯವನ್ನು ಎಲ್ಲಾ ಆಯಾಮದಲ್ಲೂ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details