ಕರ್ನಾಟಕ

karnataka

ETV Bharat / state

ಎರಡು ಲಕ್ಷ ಪಾವತಿಸಿ ಕೈ ಟಿಕೆಟ್​ಗೆ ಅರ್ಜಿ ಸಲ್ಲಿಸಿದ ಮಾಜಿ ಶಾಸಕ - ವಿಧಾನಸಭಾ ಚುನಾಚಣೆ

ಕೆಪಿಸಿಸಿ ಕಚೇರಿಗೆ ಎರಡು ಲಕ್ಷ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಮತ್ತು ಐದು ಸಾವಿರ ರೂ. ನಗದು ಹಣ ನೀಡಿ ಮಾಜಿ ಶಾಸಕ ಎಚ್.ಆರ್.ಶ್ರೀನಾಥ್ ವಿಧಾನಸಭಾ ಚುನಾಚಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ​​

kn_GVT_0
ಐದು ಲಕ್ಷ ಪಾವತಿಸಿ ಕೈ ಟಿಕೆಟ್​ಗೆ ಅರ್ಜಿ ಸಲ್ಲಿಸಿದ ಮಾಜಿ ಶಾಸಕ

By

Published : Nov 11, 2022, 11:03 PM IST

Updated : Nov 12, 2022, 9:26 AM IST

ಗಂಗಾವತಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೆಂಗಳೂರು ಕಚೇರಿ(ಕೆಪಿಸಿಸಿ)ಗೆ ಎರಡು ಲಕ್ಷ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಮತ್ತು ಐದುಸಾವಿರ ರೂ. ನಗದು ಹಣ ನೀಡಿ ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಯಸಿ ಮಾಜಿ ಶಾಸಕ ಎಚ್.ಆರ್.ಶ್ರೀನಾಥ್ ಅರ್ಜಿ ಸಲ್ಲಿಸಿದ್ದಾರೆ.

ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್​ಗೆ ಅರ್ಜಿ ಸಲ್ಲಿಸಿದ ಮೊದಲ ಆಕಾಂಕ್ಷಿಯಾಗಿ ಶ್ರೀನಾಥ್ ಗಮನ ಸೆಳೆದಿದ್ದಾರೆ. ತಮ್ಮ ಬೆಂಬಲಿಗರು, ಪಕ್ಷದ ಕೆಲ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಕಚೇರಿಗೆ ತೆರಳಿದ ಶ್ರೀನಾಥ್, ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಟಿಕೆಟ್​ನ​ ಪ್ರಬಲ ಆಕಾಂಕ್ಷಿಯಾಗಿದ್ದು, ಮಾಜಿ ಸಚಿವ ಮಲ್ಲಿಕಾರ್ಜುನ್​ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡರ ಹೆಸರೂ ಕೇಳಿ ಬರುತ್ತಿವೆ.

ಇದನ್ನೂ ಓದಿ:ಸಿದ್ದರಾಮಯ್ಯಗೆ ಸ್ಪರ್ಧಿಸಲು ಕೋಲಾರ ವಿಧಾನಸಭಾ ಕ್ಷೇತ್ರ ಸೇಫ್​: ಖಾಸಗಿ ಏಜೆನ್ಸಿಗಳ ಸಲಹೆ

Last Updated : Nov 12, 2022, 9:26 AM IST

ABOUT THE AUTHOR

...view details