ಕರ್ನಾಟಕ

karnataka

ETV Bharat / state

ರೈತರು ಮೋದಿಯವರ 56 ಇಂಚಿನ ಎದೆ ಪಂಚರ್ ಮಾಡಿದ್ದಾರೆ : ಮಾಜಿ ಸಚಿವ ಶಿವರಾಜ್ ತಂಗಡಗಿ - ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸಿರುವ (Farm laws repeal) ಬಗ್ಗೆ ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ , ಮೋದಿಯವರ 56 ಇಂಚಿನ ಎದೆ ಪಂಚರ್ ಆಗಿದೆ. ರೈತರು ಅದನ್ನು ಪಂಚರ್ ಮಾಡಿದ್ದಾರೆ ಎಂದರು..

Former minister Shivraj Thangadagi on Farm laws repeal
ಮಾಜಿ ಸಚಿವ ಶಿವರಾಜ್ ತಂಗಡಗಿ

By

Published : Nov 20, 2021, 5:29 PM IST

ಕೊಪ್ಪಳ :ಮೋದಿಯವರ 56 ಇಂಚಿನ ಎದೆ ಪಂಚರ್ ಆಗಿದೆ. ರೈತರು ಅದನ್ನು ಪಂಚರ್ ಮಾಡಿದ್ದಾರೆ. ಇದು ರೈತರಿಗೆ ಸಿಕ್ಕ ಜಯ ಎಂದು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ವ್ಯಕ್ತಪಡಿಸಿರುವುದು..

ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸಿರುವ (Farm laws repeal) ಬಗ್ಗೆ ಮಾತನಾಡಿದ ಅವರು, ರೈತರ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳುವುದನ್ನು ಬಿಡಬೇಕು. ಬಿಜೆಪಿಯವರದು ಸುಳ್ಳೆ ಮನೆದೇವರು. ಬಿಜೆಪಿಯವರದ್ದು ಸುಳ್ಳರ ಗ್ಯಾಂಗ್, ಸುಳ್ಳರ ಒಕ್ಕೂಟ ಎಂದು ವ್ಯಂಗ್ಯವಾಡಿದರು.

ಇದೀಗ ಈ ಸುಳ್ಳರ ಗ್ಯಾಂಗ್, ಕೊಪ್ಪಳ, ರಾಯಚೂರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಓಡಾಡುತ್ತಿದೆ. ರಾಜ್ಯದಲ್ಲಿ ಸುಳ್ಳರ ಗ್ಯಾಂಗ್ ಓಡಾಡಿ ಸುಳ್ಳು ಪ್ರಚಾರ ಮಾಡುತ್ತಿದೆ. ನಾಲ್ಕು ಕಡೆ ಸುಳ್ಳು ಹೇಳುತ್ತಲೇ ಪ್ರಚಾರ ಮಾಡುತ್ತಿದೆ.

ಬಿಜೆಪಿಯವರನ್ನು ಸೋಲಿಸಿದರೆ ಮಾತ್ರ ಡೀಸೆಲ್, ಪೆಟ್ರೋಲ್ ದರ ಕಡಿಮೆಯಾಗುತ್ತದೆ. ಡೀಸೆಲ್, ಪೆಟ್ರೋಲ್ ರೇಟ್ 50 ರೂಪಾಯಿವರೆಗೆ ಆಗುವ ತನಕ ಬಿಜೆಪಿ ಸೋಲಿಸಿ ಎಂದು ಹೇಳಿದರು.

ಓದಿ:ರೈತರ ಹಿತದೃಷ್ಟಿಯಿಂದ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ: ಬಿ ಎಸ್ ಯಡಿಯೂರಪ್ಪ

ABOUT THE AUTHOR

...view details