ಕರ್ನಾಟಕ

karnataka

ETV Bharat / state

'ಮಾನ್ಯ ಶಾಸಕರೇ, ನನ್ನ ಕೆಣಕಿದರೆ ಕಷ್ಟವಾದೀತು': ಮಾಜಿ ಸಚಿವ ತಂಗಡಗಿ ವಾರ್ನಿಂಗ್​​

ತನ್ನ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವವರು ನೇರವಾಗಿ ಮುಂದಕ್ಕೆ ಬರಲಿ. ದಾಖಲೆ ಸಮೇತ ಚರ್ಚೆಗೆ ಬರಬೇಕು ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರಿಗೆ, ಮಾಜಿ ಸಚಿವ ಶಿವರಾಜ ತಂಗಡಗಿ ಪಂಥಾಹ್ವಾನ ನೀಡಿದರು.

former-minister-shivaraj-tangadagi-talk
ಮಾಜಿ ಸಚಿವ ತಂಗಡಗಿ

By

Published : Jun 8, 2021, 7:48 PM IST

ಗಂಗಾವತಿ: ಮಾನ್ಯ ಶಾಸಕರೇ ಸುಖಾಸುಮ್ಮನೆ ನನ್ನನ್ನ ಕೆಣಕಬೇಡಿ ಎನ್ನುವ ಮೂಲಕ ಕನಕಗಿರಿ ಶಾಸಕ ಬಸವರಾಜ್ ದಡೇಸೂಗೂರು ವಿರುದ್ದ ಮಾಜಿ ಸಚಿವ ಶಿವರಾಜ ತಂಗಡಗಿ ಗುಡುಗಿದರು.

ಮಾಜಿ ಸಚಿವ ತಂಗಡಗಿ

ಓದಿ: ಪ್ರಚಾರಕ್ಕಾಗಿ ತಂಗಡಗಿ‌ ಚೀಪ್​​​ ಪಾಲಿಟಿಕ್ಸ್​ಗೆ ಇಳಿದಿದ್ದಾರೆ : ಶಾಸಕ ಬಸವರಾಜ್ ದಡೇಸೂಗೂರು ಆರೋಪ

ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಈ ಬಗ್ಗೆ ಕಾರಟಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುಖಾಸುಮ್ಮನೆ ಮಾನ್ಯ ಶಾಸಕರು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಾನು ಎಷ್ಟು ದಾನ - ಧರ್ಮ ಮಾಡಿದ್ದೇನೆ ಎಂಬುದನ್ನು ಹೇಳುವ ಅವಶ್ಯಕತೆ ಇಲ್ಲ. ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿ ನೀವೇನು ಮಾಡಿದ್ದೀರಿ ಅದನ್ನು ಮೊದಲು ಹೇಳಿ ಎಂದರು.

ಕೋವಿಡ್ ನಂತ ಸಂದಿಗ್ಧ ಪರಿಸ್ಥಿಯಲ್ಲಿ ನೀವು ಆಸ್ಪತ್ರೆಗಳನ್ನು ಮಾಡಲು ಆಗಿಲ್ಲ. ನನಗೆ ಡಿಸಿಯಿಂದ ಅನುಮತಿ ಕೊಡಿಸಿ ಸಾಕು ನಾನೇ ಕೋವಿಡ್ ಸೆಂಟರ್​​ಗಳನ್ನು ಸ್ಥಾಪಿಸುತ್ತೇನೆ ಎಂದರು. ತನ್ನ ಅಧಿಕಾರವಧಿಯಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವವರು ನೇರವಾಗಿ ಮುಂದಕ್ಕೆ ಬರಲಿ. ದಾಖಲೆ ಸಮೇತ ಚರ್ಚೆಗೆ ಬರಬೇಕು ಎಂದು ಕನಕಗಿರಿ ಶಾಸಕ ಬಸವರಾಜ ದಡೇಸೂಗೂರುಗೆ ಪಂಥಾಹ್ವಾನ ನೀಡಿದರು.

ಬಿಎಸ್​​ವೈ ಪರ ಬ್ಯಾಟ್:

ಬಿಎಸ್​ವೈ ಅವರ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ತೊಂದರೆ ಕೊಡುತ್ತಿಲ್ಲ. ಬದಲಿಗೆ ಬಿಜೆಪಿಗರೇ ಸಿಎಂ ಸ್ಥಾನದ ಬಗ್ಗೆ ಗೊಂದಲ ಮೂಡಿಸುತ್ತಿರುವುದು ಗಮನಿಸಿದರೆ ಸ್ವತಃ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅಂತ ಕಾಣುತ್ತದೆ. ಆದರೆ ಕೊರೊನಾದಂತ ಸಂಕಷ್ಟದಲ್ಲಿ ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸರ್ಕಾರದ ಅಸ್ತಿತ್ವ ಮುಖ್ಯವಾಗುತ್ತದೆ. ಹೀಗಾಗಿ ಯಡಿಯೂರಪ್ಪ ಇನ್ನು ಕೆಲಕಾಲ ಸಿಎಂ ಖುರ್ಚಿಯಲ್ಲಿ ಮುಂದುವರೆಯುವುದು ಸೂಕ್ತ ಎಂದರು.

ABOUT THE AUTHOR

...view details