ಕೊಪ್ಪಳ: ಜಿಲ್ಲೆಯ ಕನಕಗಿರಿ ಹಾಗೂ ಕಾರಟಗಿ ಭಾಗದಲ್ಲಿ ಆಕ್ಸಿಜನ್ಯುಕ್ತ ಕೊರೊನಾ ಕೇರ್ ಸೆಂಟರ್ ಸರ್ಕಾರದಿಂದ ಮಾಡಲಾಗುವುದಿಲ್ಲ ಎಂದು ಹೇಳಿದರೆ ವೈದ್ಯ ಸಿಬ್ಬಂದಿ ನೀಡಿದರೆ ಉಳಿದಂತೆ ಎಲ್ಲ ನಾನೇ ಮಾಡುವೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
10 ದಿನದೊಳಗೆ ಕೊರೊನಾ ಕೇರ್ ಸೆಂಟರ್ ತೆರೆಯದಿದ್ದರೆ ಹೋರಾಟ: ಶಿವರಾಜ ತಂಗಡಗಿ - ಕೊಪ್ಪಳ
ಕನಕಗಿರಿ ಹಾಗೂ ಕಾರಟಗಿ ಭಾಗದಲ್ಲಿ 10 ದಿನದೊಳಗಾಗಿ ಆಕ್ಸಿಜನ್ಯುಕ್ತ ಕೊರೊನಾ ಕೇರ್ ಸೆಂಟರ್ ಮಾಡದಿದ್ದರೆ ಹೋರಾಟ ಮಾಡುತ್ತೇನೆ. ಒಂದು ವೇಳೆ ಸರ್ಕಾರ ತನ್ನ ಕೈಯಲ್ಲಿ ಮಾಡಲು ಆಗುವುದಿಲ್ಲ ಎಂದು ಹೇಳಿದರೆ ವೈದ್ಯಕೀಯ ಸಿಬ್ಬಂದಿಯನ್ನಷ್ಟೆ ಒದಗಿಸಲಿ. ಉಳಿದಂತೆ ಎಲ್ಲಾ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
![10 ದಿನದೊಳಗೆ ಕೊರೊನಾ ಕೇರ್ ಸೆಂಟರ್ ತೆರೆಯದಿದ್ದರೆ ಹೋರಾಟ: ಶಿವರಾಜ ತಂಗಡಗಿ Former Minister Shivaraja Thangadagi](https://etvbharatimages.akamaized.net/etvbharat/prod-images/768-512-11913121-thumbnail-3x2-net.jpg)
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕನಕಗಿರಿ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ 2 ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡಿಸುತ್ತದೆ. ಅದರಲ್ಲಿ 30-40 ಸಾವಿರ ಕೋಟಿ ರೂ. ಇಂದಿನ ಸನ್ನಿವೇಶದಲ್ಲಿ ಜನರ ಆರೋಗ್ಯಕ್ಕಾಗಿ ಖರ್ಚು ಮಾಡಲಿ. ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಹಣವನ್ನು ಜನರ ಆರೋಗ್ಯಕ್ಕಾಗಿ ಖರ್ಚು ಮಾಡಲಿ ಎಂದರು.
ಕೊರೊನಾ ಪರಿಸ್ಥಿತಿ ಹಾಗೂ ನಿಯಂತ್ರಿಸಲು ಕೈಗೊಂಡ ಕ್ರಮಗಳ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಪತ್ರ ಬರೆದರೆ, ಅದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿಲ್ಲ. ಈ ರೀತಿಯ ಆದೇಶ ಸಿದ್ದರಾಮಯ್ಯ ಅವರೇ ಈ ಹಿಂದೆ ಮಾಡಿದ್ದರು ಎಂದಾದರೂ ಸಹ ಆ ಆದೇಶವನ್ನು ರದ್ದುಪಡಿಸಿ ಅವಕಾಶ ನೀಡಬೇಕು. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದವರಿಗೆ ಒಂದು ಆದೇಶ ರದ್ದುಪಡಿಸುವುದು ದೊಡ್ಡದೇನಲ್ಲ ಎಂದರು.