ಗಂಗಾವತಿ(ಕೊಪ್ಪಳ):ಹಿಂದುತ್ವ ಪ್ರತಿಪಾದನೆ ಮಾಡುವ ಕಾಳಿ ಸ್ವಾಮೀಜಿಗಳೇ(ರಿಷಿಕುಮಾರ ಸ್ವಾಮೀಜಿ ), ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ. ದಯವಿಟ್ಟು ಖಾವಿ ಬಟ್ಟೆ ಹಾಕಿಕೊಂಡು ಕೋಳಿ ಕೊಯ್ಯಬೇಡಿ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದರು. ಕಾರಟಗಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಖಾವಿ ಬಟ್ಟೆಗೆ ತನ್ನದೇ ಆದ ಶಕ್ತಿ ಇದೆ. ಅದಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದರು.
ಕಾಳಿ ಸ್ವಾಮಿಗಳಿಗೆ ಕೈ ಮುಗಿಯುವೆ, ಖಾವಿ ಹಾಕಿ ಕೋಳಿ ಕೊಯ್ಯಬೇಡಿ : ಶಿವರಾಜ ತಂಗಡಗಿ ಮನವಿ
ದಯವಿಟ್ಟು ಖಾವಿ ಬಟ್ಟೆ ಹಾಕಿಕೊಂಡು ಕೋಳಿ ಕೊಯ್ಯಬೇಡಿ ಎಂದು ಕಾಳಿ ಆರಾಧಕರಾದ ರಿಷಿಕುಮಾರ ಸ್ವಾಮೀಜಿ ಅವರಿಗೆ ಮಾಜಿ ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದರು..
ಮಾಜಿ ಸಚಿವ ಶಿವರಾಜ ತಂಗಡಗಿ
ಖಾವಿ ಧರಿಸಿದ ವ್ಯಕ್ತಿಗಳಿಗೆ ಎಂಥಹದ್ದೆ ವ್ಯಕ್ತಿಗಳಿದ್ದರೂ, ಕಾಲು ಮುಟ್ಟಿ ನಮಸ್ಕರಿಸುತ್ತಾರೆ. ಆದರೆ, ನೀವು ಖಾವಿ ಬಟ್ಟೆ ಧರಿಸಿ ಕೋಳಿ ಕೊಯ್ದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದರು. ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಧಾರ್ಮಿಕ ದಂಗಲ್ಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಇದೇ ವೇಳೆ ತಂಗಡಗಿ ಕಿಡಿಕಾರಿದರು.
ಇದನ್ನು ಓದಿ:ರಿಷಿಕುಮಾರ ಸ್ವಾಮೀಜಿ ಕಾವಿ ಧರಿಸಿ ಕೋಳಿ ಕಟ್ ಮಾಡಬಾರದಿತ್ತು.. ಸಂತೋಷ್ ಗುರೂಜಿ ಅಸಮಾಧಾನ