ಕರ್ನಾಟಕ

karnataka

ETV Bharat / state

ವೇದಿಕೆ ಮೇಲೆ ಏರುಧ್ವನಿಯಲ್ಲಿ ಮಾತನಾಡಿದ ಮಾಜಿ ಸಚಿವ: ಯಾಕೆ ಗೊತ್ತಾ? - Former minister Basavaraja Rayareddy who spoke loud voice on stage

ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಉದ್ಘಾಟನಾ‌ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಏರುಧ್ವನಿಯಲ್ಲಿ ಮಾತನಾಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಯಿತು.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ
ಮಾಜಿ ಸಚಿವ ಬಸವರಾಜ ರಾಯರೆಡ್ಡಿ

By

Published : Jan 9, 2021, 1:49 PM IST

ಕೊಪ್ಪಳ: ವೇದಿಕೆ ಮೇಲೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಏರುಧ್ವನಿಯಲ್ಲಿ ಮಾತನಾಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ನಡೆದ ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಉದ್ಘಾಟನಾ‌ ಕಾರ್ಯಕ್ರಮದಲ್ಲಿ ನಡೆಯಿತು‌.

ಆಟಿಕೆ ವಸ್ತುಗಳ ತಯಾರಿಕಾ ಕ್ಲಸ್ಟರ್ ಉದ್ಘಾಟನಾ‌ ಕಾರ್ಯಕ್ರಮ

ಸಿಎಂ ಯಡಿಯೂರಪ್ಪ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಗಂಟಲು ಸರಿ ಇಲ್ಲ ಎಂದು ಒಂದು ನಿಮಿಷಗಳ ಕಾಲ ಮಾತನಾಡುವುದಾಗಿ ತಿಳಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕರು ಕಾರ್ಯಕ್ರಮ ಕುರಿತು ಮಾತನಾಡುವಂತೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಬಳಿ ಕೇಳಿಕೊಂಡರು. ಇದಕ್ಕೆ ನಾನು ಮಾತನಾಡುವುದಿಲ್ಲ, ಯಾಕೆ ಒತ್ತಾಯ ಮಾಡುತ್ತೀರಿ ಎಂದು ಮಾಜಿ ಸಚಿವರು ವೇದಿಕೆ ಮೇಲೆ ಏರುಧ್ವನಿಯಲ್ಲಿ ಉತ್ತರಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಮುಂದೆ ಕುಳಿತಿದ್ದ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ರಾಯರೆಡ್ಡಿ ಬೆಂಬಲಿಗರು ಸಹ ರಾಯರೆಡ್ಡಿ ಪರವಾಗಿ ಘೋಷಣೆ ಹಾಕಿದರು. ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರು ಘೋಷಣೆ ಹಾಕುತ್ತಿದ್ದವರ ಬಳಿ ಹೋಗಿ ಸುಮ್ಮನಿರುವಂತೆ ಮನವೊಲಿಸಿದರು.

ABOUT THE AUTHOR

...view details