ಕರ್ನಾಟಕ

karnataka

ETV Bharat / state

ಉಗ್ರಪ್ಪ-ಸಲೀಂ ಸಂಭಾಷಣೆ ಕುರಿತಂತೆ ಕಾಂಗ್ರೆಸ್‌ ನಾಯಕರು ಏನಂತಾರೆ ನೋಡ್ಬೇಕು.. ಜಗದೀಶ್​​ ಶೆಟ್ಟರ್ - Koppal

ದೇಶದ ಸಾಕಷ್ಟು ಅಧಿಕಾರಿಗಳಲ್ಲಿ ಆರ್​ಎಸ್​ಎಸ್​​ ಮೈಂಡಸೆಟ್ ಇದೆ. ದೇಶದ ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳೆಲ್ಲ ಆರ್​ಎಸ್​ಎಸ್‌​ನವರೇ.. ಆರ್​ಎಸ್​ಎಸ್​​ ಯಾವುದೇ ಪಕ್ಷದ ಪರವಿಲ್ಲ. ಅದು ದೇಶದ ಪರಂಪರೆ, ಹಿಂದೂ ಸಂಸ್ಕೃತಿ ಉಳಿವಿಗಾಗಿ ಹೋರಾಟ ಮಾಡುತ್ತಿದೆ..

Jagadish Shettar
ಜಗದೀಶ್​​ ಶೆಟ್ಟರ್

By

Published : Oct 13, 2021, 4:04 PM IST

ಕೊಪ್ಪಳ :ಆರ್​​ಎಸ್​​ಎಸ್ ಒಂದು ದೊಡ್ಡ ಆಲದ ಮರವಿದ್ದಂತೆ. ಅಕಸ್ಮಾತ್ ಆರ್​​ಎಸ್​​ಎಸ್ ಇರದೆ ಹೋಗಿದ್ದರೆ ನಾಲ್ಕೈದು ಪಾಕಿಸ್ತಾನ ಹುಟ್ಟಿಕೊಳ್ಳುತ್ತಿದ್ದವು ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್ ಹೇಳಿದ್ದಾರೆ‌.

ಮಾಜಿ ಸಿಎಂ ಜಗದೀಶ್​​ ಶೆಟ್ಟರ್

ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅಲ್ಪಸಂಖ್ಯಾತರ ಓಲೈಕೆಗಾಗಿ ಮಾತನಾಡುತ್ತಿದ್ದಾರೆ.‌ ಈ ಇಬ್ಬರು ಸಹ ಕಾಂಪಿಟೇಶನ್ ಮೇಲೆ ಆರ್​​ಎಸ್​​ಎಸ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ತೊಂದರೆ.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ತಾಕತ್ತಿದ್ದರೆ ತಾಲಿಬಾನ್ ಪರವೋ ಅಥವಾ ವಿರೋಧವೋ ಎಂದು ಮೊದಲು ಹೇಳಲಿ. ಕುಮಾರಸ್ವಾಮಿ ಮೊದಲು ಏನೋ ಅಂತಾರೆ. ಆಮೇಲೆ ತಪ್ಪಾಯ್ತು ಅಂತಾರೆ. ಅವರ ಸ್ವಭಾವವೇ ಹಾಗೆ. ಅವರದು ಒಂಥರಾ ಹಿಟ್ ಅಂಡ್ ರನ್ ಕೇಸ್ ಎಂದು ಜಗದೀಶ್​​ ಶೆಟ್ಟರ್ ವ್ಯಂಗ್ಯವಾಡಿದರು.

ಆರ್​ಎಸ್​ಎಸ್​​ ಯಾವುದೇ ಪಕ್ಷದ ಪರವಿಲ್ಲ

ದೇಶದ ಸಾಕಷ್ಟು ಅಧಿಕಾರಿಗಳಲ್ಲಿ ಆರ್​ಎಸ್​ಎಸ್​​ ಮೈಂಡಸೆಟ್ ಇದೆ. ದೇಶದ ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿಗಳೆಲ್ಲ ಆರ್​ಎಸ್​ಎಸ್‌​ನವರೇ.. ಆರ್​ಎಸ್​ಎಸ್​​ ಯಾವುದೇ ಪಕ್ಷದ ಪರವಿಲ್ಲ. ಅದು ದೇಶದ ಪರಂಪರೆ, ಹಿಂದೂ ಸಂಸ್ಕೃತಿ ಉಳಿವಿಗಾಗಿ ಹೋರಾಟ ಮಾಡುತ್ತಿದೆ.

ನಾವೆಲ್ಲ ಆರ್​ಎಸ್​ಎಸ್​​ ಪ್ರೇರಣೆಯಿಂದ ಕೆಲಸ ಮಾಡುತ್ತಿದ್ದೇವೆ. ದೇಶದಲ್ಲಿ ಆರ್​ಎಸ್​ಎಸ್ ಸಂಪರ್ಕಕ್ಕೆ ಬಾರದವರು ಇಲ್ಲ. ಅಲ್ಲದೇ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಕೂಡ ಆರ್​ಎಸ್​ಎಸ್‌ನವರು ಎಂದು ಶೆಟ್ಟರ್​​ ತಿಳಿಸಿದರು.

ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪದ ಬಗ್ಗೆ, ಉಗ್ರಪ್ಪ-ಸಲೀಂ ಅವರ ವಿಡಿಯೋ ನೋಡಿಲ್ಲ. ನೋಡದೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ. ಆ ವಿಡಿಯೋಗೆ ಉಗ್ರಪ್ಪ ಅವರ ಪ್ರತಿಕ್ರಿಯೆ ಏನು? ಕಾಂಗ್ರೆಸ್ ಪಕ್ಷದವರು ಏನಾಂತರೆ ನೋಡೋಣ. ಆಮೇಲೆ ನಾನು ಆ ಬಗ್ಗೆ ಮಾತಾಡುತ್ತೇನೆ ಎಂದು ಜಗದೀಶ್​​ ಶೆಟ್ಟರ್ ಇದೇ ಸಂದರ್ಭದಲ್ಲಿ ಹೇಳಿದರು.

ABOUT THE AUTHOR

...view details