ಗಂಗಾವತಿ: ಅನಧಿಕೃತ ಜೂಜಾಟದ ಕೇಂದ್ರದ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಜಪ್ತಿಯಾದ 17 ಐಷಾರಾಮಿ ಕಾರುಗಳು ಕಳೆದ ಮೂರು ವಾರದಿಂದ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಧೂಳು ಹಿಡಿಯುತ್ತಿದ್ದು, ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣ ಕಾಣಿಸುತ್ತಿಲ್ಲ.
ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳಿಗೆ ಠಾಣೆಯಲ್ಲಿಯೇ ಜಾಮೀನು ನೀಡಲಾಗಿದೆ. ಆದರೆ ಜಪ್ತಿಯಾದ ವಾಹನಗಳಿಗೆ ಕಡ್ಡಾಯವಾಗಿ ನ್ಯಾಯಾಲಯಗಳ ಮೂಲಕವೇ ಜಾಮೀನು ಮಂಜೂರಾಗಬೇಕಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.