ಗಂಗಾವತಿ:ಸರಿಸೃಪ ಜಾತಿಯ ಉಡವನ್ನು ಹಿಡಿದು ಜೀವಂತವಾಗಿ ನಾಯಿಗಳ ಬಾಯಿಗೆ ಕೊಟ್ಟು ವಿಕೃತಿ ಮೆರೆದ ಯುವಕನನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಹಿಡಿದು ಆತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ತಾಲ್ಲೂಕಿನ ಮಲ್ಲಾಪುರ ಗ್ರಾಮದ ತಾತಪ್ಪ ಎಂಬ 25 ವರ್ಷದ ಯುವಕ ಈ ವಿಕೃತಿ ಮರೆದಿದ್ದು, ಇತ್ತೀಚೆಗೆ ಗ್ರಾಮದಲ್ಲಿ ಉಡವೊಂದನ್ನು ಬೇಟೆಯಾಡಿ ಅದನ್ನು ಎರಡು ನಾಯಿಗಳಿಗೆ ತಿನ್ನಲು ನೀಡಿ ಮನರಂಜನೆ ಪಡೆದು ವಿಕೃತಿ ಮೆರೆದಿದ್ದ. ಸಾಲದು ಎಂಬಂತೆ ಅದನ್ನು ವಿಡಿಯೋ ಮಾಡಿ ಟಿಕ್ಟಾಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಸೋಮವಾರ ಮಧ್ಯಾಹ್ನ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಯುವಕನ್ನು ಪತ್ತೆ ಹಚ್ಚಿದ್ದಾರೆ.