ಗಂಗಾವತಿ:ಹಂಪಿಯ ಒಡಲಲ್ಲಿ ಅವಿತಿರುವ ಆನೆಗೊಂದಿ ಸುತ್ತಲಿನ ಪ್ರದೇಶಕ್ಕೆ ಅಧ್ಯಯನ, ಪ್ರವಾಸಕ್ಕೆ ಬರುವ ವಿದೇಶಿಗರಿಗೆ ಕನ್ನಡ ಭಾಷೆ ಹಾಗೂ ಕರುನಾಡು ಅಂದ್ರೆ ಅದೇನೋ ಅಚ್ಚುಮೆಚ್ಚು.
ಆನೆಗೊಂದಿಯಲ್ಲಿ ವಿದೇಶಿಗರಿಂದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ - Foreigners celebrating kannada Rajyothsava at Koppal Anegondi
ಕರುನಾಡು ರಾಜ್ಯೋತ್ಸವದ ಹೊಸ್ತಿಲಲ್ಲಿದ್ದು ಗಂಗಾವತಿಯ ಪ್ರವಾಸಿ ತಾಣ ಆನೆಗೊಂದಿಗೆ ಇಸ್ರೇಲ್, ಪ್ಯಾಲೆಸ್ತೀನ್, ಆಸ್ಟ್ರೇಲಿಯ, ನಾರ್ವೆ ಹಾಗು ನ್ಯೂಜಿಲೆಂಡ್ ಮೊದಲಾದ ದೇಶಗಳಿಂದ ಆಗಮಿಸಿದ ಪ್ರವಾಸಿಗರು ಕೈಯಲ್ಲಿ ನಾಡಧ್ವಜ ಹಿಡಿದು ರಾಜ್ಯೋತ್ಸವದ ಸಂತಸ ಹಂಚಿಕೊಂಡಿದ್ದಾರೆ.
ಇಲ್ಲಿನ ವಿರುಪಾಪುರಗಡ್ಡೆಗೆ ಸ್ಥಳೀಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿಗರು ಭೇಟಿ ನೀಡುತ್ತಾರೆ. ಪ್ರತೀ ವರ್ಷ ಆಕ್ಟೋಬರ್ ತಿಂಗಳ ಮೂರನೇ ವಾರದಿಂದ ಆರಂಭವಾಗುವ ವಿದೇಶಿಗರ ಆಗಮನ ಮಾರ್ಚ್ ಅಂತ್ಯದವರೆಗೂ ಮಂದುವರೆಯುತ್ತದೆ. ಇಲ್ಲಿಗೆ ಭೇಟಿ ನೀಡುವ ವಿದೇಶಿಗರು ಸ್ಥಳೀಯರೊಂದಿಗೆ ಸೇರಿ ರಾಜ್ಯೋತ್ಸವ, ಹೋಳಿ, ಸಂಕ್ರಮಣಗಳನ್ನು ಖುಷಿಯಿಂದ ಆಚರಿಸುತ್ತಾರೆ.
ಇದೀಗ ನಾಡು ರಾಜ್ಯೋತ್ಸವದ ಹೊಸ್ತಿಲಲ್ಲಿದ್ದು, ಇಸ್ರೇಲ್, ಪ್ಯಾಲೆಸ್ತೀನ್, ಆಸ್ಟ್ರೇಲಿಯಾ, ನಾರ್ವೆ, ನ್ಯೂಜಿಲೆಂಡ್ ಮೊದಲಾದ ದೇಶಗಳಿಂದ ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಕೈಯಲ್ಲಿ ನಾಡಧ್ವಜ ಹಿಡಿದು ರಾಜ್ಯೋತ್ಸವದ ಸಂತಸ ಹಂಚಿಕೊಳ್ಳುತ್ತಿದ್ದಾರೆ.