ಗಂಗಾವತಿ:ವಿದೇಶಿ ಮಹಿಳೆಗೆ ಜನಿಸಿದ ಹಿನ್ನೆಲೆ ಫ್ರಾನ್ಸ್ ಸಂಜಾತೆ ಎಂದು ಗಮನ ಸೆಳೆದಿದ್ದ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಅಂಜನಾದೇವಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ.
ಗಾಂಧಿ ಜಯಂತಿ ಆಚರಣೆಯಲ್ಲಿ ವಿದೇಶಿ ಮಹಿಳೆ ಸಾಮಾನ್ಯ ಮಹಿಳೆ ಮತ್ತು ಎಸ್ಟಿ ಮಹಿಳೆಗೆ ಮೀಸಲಾಗಿದ್ದ ಗ್ರಾಮದ ಎರಡನೇ ವಾರ್ಡ್ಗೆ ನಡೆದ ಚುನಾವಣೆಯಲ್ಲಿ ಒಟ್ಟು ಎಂಟು ಜನ ಅಖಾಡದಲ್ಲಿದ್ದರು. ಈ ಪೈಕಿ ಅಂಜನಾದೇವಿ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಎನ್. ಕಿರಣ್ಮಯಿ ಎಂಬ ಮಹಿಳೆ 308 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಅಂಜನಾದೇವಿಗೆ ಕೇವಲ 200 ಮತ ಲಭಿಸಿವೆ.
ಇದನ್ನೂ ಓದಿ : ನಾನಿರೋತನಕ ನಂದೇ ಹವಾ; ಸೋದರತ್ತೆಯ ಮುಂದೆ ಸೊಸೆಗೆ ಸೋಲು!
ಗ್ರಾಮ ಪಂಚಾಯಿತಿಯ ಕೊನೆಯ ಅವಧಿಗೆ ಅಂಜನಾದೇವಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಅ.2ರಂದು ನಡೆದ ಗಾಂಧಿ ಜಯಂತಿಯ ಸಂದರ್ಭದಲ್ಲಿ ಇಡೀ ಪಂಚಾಯಿತಿಯ ಪ್ರದೇಶದಲ್ಲಿ ಗಾಂಧಿ ಸಾರಿದ ಸಂದೇಶಗಳನ್ನು ಬರೆಯಿಸಿ ವಿಭಿನ್ನವಾಗಿ ಗಾಂಧಿ ಜಯಂತಿ ಆಚರಿಸುವ ಮೂಲಕ ಅಂಜನಾದೇವಿ ಜಿಲ್ಲೆಯ ಗಮನ ಸೆಳೆದಿದ್ದರು.
ಗಾಂಧಿ ಜಯಂತಿ ಆಚರಣೆಯಲ್ಲಿ ವಿದೇಶಿ ಮಹಿಳೆ ಅಂಜನಾ ದೇವಿಯ ತಂದೆ ಶಾಂತಮೂರ್ತಿ ಸ್ಥಳೀಯರಾಗಿದ್ದು, 1962ರಲ್ಲಿ ಪ್ರವಾಸಕ್ಕೆಂದು ಬಂದಿದ್ದ ಫ್ರಾನ್ಸ್ ದೇಶದ ಫ್ರಾನ್ಸ್ವಾ ವೇರೂನ್ ಎಂಬ ಮಹಿಳೆಯೊಂದಿಗೆ ವಿವಾಹವಾಗಿದ್ದರು. ಅಂಜನಾ ದೇವಿ ಆನೆಗೊಂದಿಯಲ್ಲಿ ಜನಿಸಿದ್ದಾರೆ. ಆದರೆ, ಈಗಲೂ ತಾಯಿ ತವರು ಫ್ರಾನ್ಸ್ದೊಂದಿಗೆ ನಂಟಿದೆ.