ಕುಷ್ಟಗಿ: ದಾನಿಗಳ ಸಹಕಾರದೊಂದಿಗೆ ಪುರಸಭೆ ವಿತರಿಸುತ್ತಿರುವ ಕಿಟ್ ಪಡೆಯಲು ನೂಕು ನುಗ್ಗಲು ಶುರುವಾಗಿದ್ದು, ಜನರನ್ನು ನಿಯಂತ್ರಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕುಷ್ಟಗಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್ಗಾಗಿ ನೂಕು ನುಗ್ಗಲು: ಪುರಸಭೆ ಸಿಬ್ಬಂದಿಗೆ ಸವಾಲು - ಕುಷ್ಟಗಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್ಗಾಗಿ ನೂಕು ನುಗ್ಗಲು
ತಾಲೂಕು ಆಡಳಿತಕ್ಕೆ ದಾನಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಕಿಟ್ನ್ನು ಕುಷ್ಟಗಿಯಲ್ಲಿ ವಿತರಣೆ ಮಾಡಲಾಗುತ್ತಿದ್ದು, ಕಿಟ್ ಪಡೆಯಲು ಬಂದವರನ್ನು ನಿಯಂತ್ರಿಸುವುದು ಪುರಸಭೆಗೆ ಸವಾಲಾಗಿ ಪರಿಣಮಿಸಿದೆ.
ತಾಲೂಕು ಆಡಳಿತಕ್ಕೆ ದಾನಿಗಳು ಆಹಾರ ಸಾಮಗ್ರಿಗಳ ಕಿಟ್ ನೀಡಿದ್ದು, ಪಡಿತರ ಕಾರ್ಡ್ ಇಲ್ಲದವರು ಮತ್ತು ನಿರ್ಗತಿಕರಿಗೆ ವಿತರಿಸಲು ತಿಳಿಸಿದ್ದಾರೆ. ಕುಷ್ಟಗಿಯಲ್ಲಿ ಕಿಟ್ ವಿತರಿಸುವ ಜವಬ್ದಾರಿ ಪುರಸಭೆಗೆ ನೀಡಲಾಗಿದೆ. ಆಧಾರ್ ಕಾರ್ಡ್ ಪರಿಗಣಿಸಿ ಜನರಿಗೆ ಕಿಟ್ ವಿತರಿಸಲಾಗುತ್ತಿದೆ. ಆದರೆ, ದಿನಕಳೆದಂತೆ ಕಿಟ್ ಪಡೆಯಲು ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ನೂಕು ನುಗ್ಗಲು ಶುರುವಾಗಿದೆ. ಸಾಮಾಜಿಕ ಅಂತರ ಕಾಪಾಡುವಂತೆ ಎಷ್ಟೇ ಹೇಳಿದ್ರು ಜನ ಮಾತ್ರ ಕೇಳುತ್ತಿಲ್ಲ. ಹೀಗಾಗಿ ಜನರನ್ನು ನಿಯಂತ್ರಿಸುವುದು ಪುರಸಭೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
ಈ ಮಧ್ಯೆ ಪುರಸಭೆ ಸಿಬ್ಬಂದಿ ಕೊಟ್ಟವರಿಗೇ ಮತ್ತೆ ಮತ್ತೆ ಕಿಟ್ ಕೊಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದು, ಈ ಬಗ್ಗೆ ತಹಶೀಲ್ದಾರ್ಗೆ ದೂರು ನೀಡಿದ್ದಾರೆ.