ಗಂಗಾವತಿ:ಗಣೇಶೋತ್ಸವ ಹಾಗೂ ಮೊಹರಂ ಆಚರಣೆಗಳನ್ನು ಸರಳವಾಗಿ ಆಚರಿಸಬೇಕು. ಮುಖ್ಯವಾಗಿ ಮಸೀದಿಗೆ ಅಪರಿಚಿತರು ಆಗಮಿಸಿದ್ರೆ ನಿಗಾ ವಹಿಸಬೇಕು ಎಂದು ಡಿವೈಎಸ್ಪಿ ಚಂದ್ರಶೇಖರ ಹೇಳಿದರು.
ಸರ್ಕಾರದ ನಿಯಮಗಳಂತೆ ಗಣೇಶ್, ಮೊಹರಂ ಹಬ್ಬ ಆಚರಿಸಿ: ಡಿವೈಎಸ್ಪಿ
ಗಣೇಶ ಹಬ್ಬ ಹಾಗೂ ಮೊಹರಂ ಆಚರಣೆಯನ್ನು ಸರ್ಕಾರದ ನಿಯಮಗಳಂತೆ ಆಚರಿಸಬೇಕು. ಯಾವುದೇ ಗಲಾಟೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಚಂದ್ರಶೇಖರ ಹೇಳಿದರು.
ಹಬ್ಬಗಳನ್ನು ಸರ್ಕಾರದ ನಿಯಮಗಳಂತೆ ಆಚರಿಸಲು ಸೂಚನೆ
ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಅಹಿತಕರ ಘಟನೆಗಳು ನಡೆಯದಂತೆ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದರು.
ಮೊಹರಂ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ, ಗ್ರಾಮೀಣ ಭಾಗದಲ್ಲಿ ಹಿಂದುಗಳೇ ಹೆಚ್ಚಿನ ಪ್ರಮಾಣದಲ್ಲಿ ಆಚರಿಸುತ್ತಾರೆ. ಸಾಮರಸ್ಯ, ಭಾವೈಕ್ಯತೆಯ ಸಂಕೇತವಾಗಿದೆ. ಎಲ್ಲರೂ ಕೂಡಿ ಆಚರಿಸಲಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಸ್ಲಿಂ ಮುಖಂಡರು ಭರವಸೆ ನೀಡಿದರು.