ಕರ್ನಾಟಕ

karnataka

ETV Bharat / state

ಬಿಜೆಪಿ ನಾಯಕರಿರುವ ಫ್ಲೆಕ್ಸ್​ನಲ್ಲಿ ಡಿವೈಎಸ್ಪಿ ಫೋಟೋ ಹಾಕಿ ಎಡವಟ್ಟು! - ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಶುಭಾಶಯ ಕೋರುವ ಫ್ಲೆಕ್ಸ್‌ನಲ್ಲಿ ತಪ್ಪು

ಕೊಪ್ಪಳದಲ್ಲಿ ಬಿಜೆಪಿ ನಾಯಕರಿರುವ ಫ್ಲೆಕ್ಸ್​ನಲ್ಲಿ ಜಿಲ್ಲಾ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರ ಫೋಟೋ ಕಂಡು ಬಂದಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಫ್ಲೆಕ್ಸ್ ಯಡವಟ್ಟು

By

Published : Oct 13, 2019, 2:06 PM IST

ಕೊಪ್ಪಳ:ಬಿಜೆಪಿ ನಾಯಕರಿರುವ ಫ್ಲೆಕ್ಸ್​ನಲ್ಲಿ ಜಿಲ್ಲಾ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರ ಫೋಟೋ ಕಂಡು ಬಂದಿರೋದು ಟೀಕೆಗೆ ಕಾರಣವಾಗಿದೆ.

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಶುಭಾಶಯ ಕೋರುವ ಫ್ಲೆಕ್ಸ್‌ ನಗರದ ಸಾಹಿತ್ಯ ಭವನದ ಮುಂದೆ ಹಾಕಲಾಗಿದೆ. ಇದರಲ್ಲಿಸಂಸದ ಸಂಗಣ್ಣ ಕರಡಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಬಹುತೇಕ ಬಿಜೆಪಿ‌ ಕಾರ್ಯಕರ್ತರಿರುವ ಜೊತೆಗೆ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಭಾವಚಿತ್ರವನ್ನೂ ಪ್ರಿಂಟ್ ಮಾಡಲಾಗಿದೆ.

ಈ ಬಗ್ಗೆ ಎಚ್ಚೆತ್ತುಕೊಂಡ ಫ್ಲೆಕ್ಸ್ ಹಾಕಿದವರು ಡಿವೈಎಸ್ಪಿಯ ಫೋಟೋಗೆ ವೈಟ್ ಪೇಪರ್ ಹಚ್ಚಿ ಮುಚ್ಚಿದ್ದಾರೆ.

For All Latest Updates

ABOUT THE AUTHOR

...view details