ಕೊಪ್ಪಳ:ಬೈಕ್ ನಲ್ಲಿ ಸಾಮಾನ್ಯವಾಗಿ ಇಬ್ಬರು ಸಂಚರಿಸಬಹುದು. ಅದಕ್ಕಿಂತ ಹೆಚ್ಚಿನ ಜನ ಪ್ರಯಾಣಿಸುವುದು ಅಪರಾಧ. ಆದರೆ, ಬರೋಬ್ಬರಿ ಐದು ಜನರು ಒಂದೇ ಬೈಕ್ನಲ್ಲಿ ಸವಾರಿ ಮಾಡುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆಯೊಂದು ನಗರದ ಹೊರವಲಯದಲ್ಲಿ ಕಂಡುಬಂದಿದೆ.
ಒಂದೇ ಬೈಕ್ನಲ್ಲಿ 5 ಜನ ಪ್ರಯಾಣ ಓದಿ: ಗ್ಯಾಂಗ್ ರೇಪ್ ಪ್ರಕರಣ: ಪೊಲೀಸರಿಂದ ಗುಂಡು ತಿಂದವ ಬಾಂಗ್ಲಾದಲ್ಲಿ ಟಿಕ್ಟಾಕ್ ಸ್ಟಾರ್!
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಿದ್ದು, ಬೇರೆ ಕಡೆ ಸಂಚರಿಸಲು ದ್ವಿಚಕ್ರ ವಾಹನವೇ ಜನರಿಗೆ ಅನಿವಾರ್ಯವಾಗಿದೆ. ಹೊಸಪೇಟೆ ಕಡೆಯಿಂದ ಕೊಪ್ಪಳಕ್ಕೆ ಬೈಕ್ ನಲ್ಲಿ ಬರೋಬ್ಬರಿ ಐದು ಜನರು ಪ್ರಯಾಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಈ ರೀತಿ ತೆರಳಲು ಇವರಿಗೆ ಅನಿವಾರ್ಯ ಇತ್ತೇ..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಸಂಪೂರ್ಣ ಲಾಕ್ಡೌನ್ ನಿಂದ ವಾಹನ ಸಂಚಾರ ಬಂದ್ ಆಗಿರುವುದರಿಂದ ಕೆಲವರು ಬೈಕ್ ಮೂಲಕ ಪ್ರಯಾಣಿಸುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ.