ಗಂಗಾವತಿ: ನಗರದ ಔಷಧಿ ಉದ್ಯಮಿಯೊಬ್ಬರ ಮನೆಯಲ್ಲಿ 150ಕ್ಕೂ ಹೆಚ್ಚು ಪ್ರಮಾಣದ ರೆಮ್ಡಿಸಿವಿರ್ ಔಷಧಿಯ ಅಕ್ರಮ ದಾಸ್ತಾನು ಪತ್ತೆಯಾದ ಬೆನ್ನಲ್ಲೆ ವಿದ್ಯಾನಗರದ ವ್ಯಕ್ತಿಯೊಬ್ಬರ ಮನೆಯಲ್ಲಿ ಐದು ವೈಯಲ್ ದೊರೆತಿದೆ.
ಮನೆಯಲ್ಲಿ ರೆಮ್ಡಿಸಿವಿರ್ ಔಷಧಿ ದಾಸ್ತಾನು ಪತ್ತೆ, ವ್ಯಕ್ತಿ ವಶಕ್ಕೆ - ಗಂಗಾವತಿಯ ಮನೆಯಲ್ಲಿ ಐದು ರೆಮ್ಡಿಸಿವಿರ್ ಪತ್ತೆ ವ್ಯಕ್ತಿ ವಶಕ್ಕೆ
ನಗರದ ಪಾನ್ ಬೀಡಾ ಅಂಗಡಿಯೊಂದರಲ್ಲಿ ಮಾರಾಟ ಮಾಡುತ್ತಿದ್ದ ರೆಮ್ಡಿಸಿವಿರ್ ಲಸಿಕೆಯನ್ನು ಸಂಗ್ರಹಿಸಿ ತನ್ನ ಮನೆಯಲ್ಲಿಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಐದು ರೆಮ್ಡಿಸಿವಿರ್ ಪತ್ತೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ಫ್ರಿಡ್ಜ್ನಲ್ಲಿಟ್ಟಿದ್ದ ಐದು ರೆಮ್ಡಿಸಿವಿರ್ ವೈಯಲ್ಗಳನ್ನು ವಶಕ್ಕೆ ಪಡೆದರು. ನಗರದ ಪಾನ್ ಬೀಡಾ ಅಂಗಡಿಯೊಂದರಲ್ಲಿ ಮಾರಾಟ ಮಾಡುತ್ತಿದ್ದ ಔಷಧಿಯನ್ನು ಈ ವ್ಯಕ್ತಿ ಸಂಗ್ರಹಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಕೊರೊನಾದಿಂದ ಮುಕ್ತರಾಗಲು ಗೋ ಮೂತ್ರ ಸೇವಿಸಿ: ಬಿಜೆಪಿ ಶಾಸಕ