ಕರ್ನಾಟಕ

karnataka

ETV Bharat / state

ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಲಕ್ಷದ ಬಿಲ್​​... ಕಾಮಗಾರಿ ಮಾತ್ರ ನಿಲ್​​​ ಆರೋಪ - fake bill in gangavathi for road

ಗಂಗಾವತಿ ತಾಲೂಕಿನ ಗ್ರಾಮವೊಂದರಲ್ಲಿ ಜಿ.ಪಂ ಇಲಾಖೆಯಿಂದ ಕಾಮಗಾರಿಯೇ ಮಾಡದೇ ಐದು ಲಕ್ಷ ರೂ ಗಳ ನಕಲಿ ಬಿಲ್​​ ಸೃಷ್ಟಿಸಿ ಅವ್ಯವಹಾರ ಮಾಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ.

ಕಾಮಗಾರಿಯಾಗದೆ ಉಳಿದಿರುವ ಜಾಗ

By

Published : Nov 5, 2019, 1:48 PM IST

ಗಂಗಾವತಿ: ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ಇಲಾಖೆಯ ಲೈನ್ ವಿಭಾಗದಿಂದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಸುಮಾರು ಐದು ಲಕ್ಷ ರೂಪಾಯಿ ಹಣ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕೆಲ ದಾಖಲೆಗಳು ಲಭ್ಯವಾಗಿದೆ.

ನಕಲಿ ಬಿಲ್​​

ಜೀರಾಳ ಕಲ್ಗುಡಿ ಗ್ರಾಮ ಪಂಚಾಯಿತಿಯ ಸುಬ್ಬಾರಾವ್ ಎಂಬುವವರ ಹೊಲದ ಸಮೀಪ 'ನಮ್ಮ ಹೊಲ, ನಮ್ಮ ದಾರಿ' ಎಂಬ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಆದರೆ ವಾಸ್ತವದಲ್ಲಿ ಅಲ್ಲಿ ಕಾಮಗಾರಿಯೇ ನಡೆದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರ ಅಳಲು

ಅಲ್ಲದೇ ಜೀರಾಳ ಪಂಚಾಯಿತಿಯ ಕೂಲಿಕಾರರ ಜಾಬ್ ಕಾರ್ಡ್​ ಬದಲಿಗೆ ಹೇರೂರು ಪಂಚಾಯಿತಿಯ ಜಾಬ್ ಕಾರ್ಡ್​ಗ​​​ಳಿಗೆ ಹಣ ಸಂದಾಯ ಮಾಡಲಾಗಿದ್ದು, ಇದು ಸಂಪೂರ್ಣ ಅವ್ಯವಹಾರವಾಗಿದೆ. ಇದರ ಹಿಂದೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಕೈವಾಡವಿದೆ. ಈ ಕುರಿತು ತಕ್ಷಣ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ABOUT THE AUTHOR

...view details