ಗಂಗಾವತಿ:ಯುವಕನ ಮೇಲೆ ದಾಳಿ ಮಾಡಿ ತಿಂದು ಹಾಕಿದ ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಇದೀಗ ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದು, ಐದು ಡ್ರೋನ್ ಕ್ಯಾಮರಾ ಬಳಸಿ ಚಿರತೆಯ ಚಲನವಲನ ಪತ್ತೆಗೆ ಮುಂದಾಗಿದೆ.
ಗಂಗಾವತಿ: ನರಭಕ್ಷಕ ಚಿರತೆ ಸೆರೆಹಿಡಿಯಲು ಐದು ಡ್ರೋನ್, ನಾಲ್ಕು ಬೋನ್ ಬಳಕೆ - ಜಿಲ್ಲಾ ಅರಣ್ಯಾಧಿಕಾರಿ ಹರ್ಷಭಾನು ಭೇಟಿ
ಚಿರತೆ ದಾಳಿ ಮಾಡಿದ ಸ್ಥಳದಲ್ಲಿ ಇದೀಗ ಒಂದು ಬೃಹತ್ ಗಾತ್ರದ ಬೋನ್ ಇಡಲಾಗಿದ್ದು, ವನ್ಯ ಪ್ರಾಣಿಗಳು ಓಡಾಡಬಹುದಾದ ಸಂಭಾವ್ಯ ಸ್ಥಳಗಳನ್ನು ಗುರುತಿಸಿ ಬೋನ್ ಇಡಲಾಗುವುದು. ಎರಡು ಮೂರು ದಿನಗಳ ಕಾಲ ಕಾರ್ಯಾಚರಣೆ ಮುಂದುವರೆಯುತ್ತದೆ ಎಂದು ಆರ್ಎಫ್ಸಿ ಶಿವರಾಜ ಮೇಟಿ ತಿಳಿಸಿದ್ದಾರೆ.
ನರಭಕ್ಷಕ ಚಿರತೆ ಸೆರೆಹಿಡಿಯಲು ಐದು ಡ್ರೋಣ್, ನಾಲ್ಕು ಬೋನ್ ಬಳಕೆ..
ಅಲ್ಲದೇ ಐದು ಬೋನ್ಗಳನ್ನು ಇಟ್ಟು ಜನವಸತಿ ಹಾಗೂ ಜನಸಂಚಾರ ಪ್ರದೇಶಕ್ಕೆ ನುಗ್ಗುತ್ತಿರುವ ಪ್ರಾಣಿಗಳನ್ನು ಹಿಡಿದು ಸಂರಕ್ಷಿತ ಪ್ರದೇಶಕ್ಕೆ ಬಿಟ್ಟು ಬರುವ ಯೋಜನೆ ರೂಪಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಬಳ್ಳಾರಿ ವಲಯ ಸಂರಕ್ಷಣಾಧಿಕಾರಿ ಲಿಂಗರಾಜ್, ಜಿಲ್ಲಾ ಅರಣ್ಯಾಧಿಕಾರಿ ಹರ್ಷಭಾನು ಭೇಟಿ ನೀಡಿ ಪರಿಶೀಲನೆ ನಡೆಸಿದರು.