ಗಂಗಾವತಿ(ಕೊಪ್ಪಳ):ನಗರದ ಕಟ್ಟಿಗೆ ಮತ್ತು ವುಡ್ ಪ್ಲೇನಿಂಗ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಮನೆಬಾಗಿಲು, ಚೌಕಟ್ಟಿನ ಕಟ್ಟಿಗೆ, ಯಂತ್ರೋಪಕರಣ ಸೇರಿದಂತೆ ಇತರೆ ವಸ್ತುಗಳು ಬೆಂಕಿಗಾಹುತಿಯಾಗಿ ಸುಮಾರು 15 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ನಾಶವಾಗಿದೆ ಎಂದು ತಿಳಿದುಬಂದಿದೆ.
ಕಟ್ಟಿಗೆ ಅಡ್ಡೆಯಲ್ಲಿ ಆಕಸ್ಮಿಕ ಬೆಂಕಿ: ₹15 ಲಕ್ಷ ಮೊತ್ತದ ವಸ್ತು ಬೆಂಕಿಗಾಹುತಿ ದುರಗಮ್ಮ ನಾಲಾದಿಂದ ಜುಲೈನಗರಕ್ಕೆ ಹೋಗುವ ಬಿಲಾವಲ್ ಮಸೀದಿ ಕಾಂಪ್ಲೆಕ್ಸ್ನಲ್ಲಿದ್ದ ಡಿ.ಎಂ ಮೆಹಬೂಬ ಎಂಬವರಿಗೆ ಸೇರಿದ ಡಿ.ಎಂ ಪ್ಲೇನಿಂಗ್ ಅಂಗಡಿಯಲ್ಲಿ ಘಟನೆ ನಡೆದಿದೆ.
ಬೆಂಕಿಗಾಹುತಿಯಾಗಿರುವ ಅಂಗಡಿ ಮಾಲಿಕ ಬಡವನಾಗಿದ್ದು, ಆತನ ಅಂಗಡಿಗೆ ಸಾಗುವಾನಿ, ಮತ್ತಿ ಮತ್ತು ಬೇವು ಸೇರಿದಂತೆ ಸಾಕಷ್ಟು ಮಾದರಿಯ ಕಟ್ಟಿಗೆಯನ್ನು ಮನೆ, ಪೀಠೋಪಕರಣಕ್ಕೆ ಜನರು ಮಾರಾಟ ಮಾಡಿದ್ದರು. ಇದೀಗ ಮಹೆಬೂಬ ಸಾಬನಿಗೆ ದಿಕ್ಕು ತೋಚದಂತಾಗಿದೆ ಎಂದು ನಗರಸಭೆಯ ಸದಸ್ಯ ಕಾಸೀಂಸಾಬ ಹೇಳಿದ್ದಾರೆ.
ಇದನ್ನೂ ಓದಿ:ಶಿರಾಳಕೊಪ್ಪದ ಫರ್ನಿಚರ್ ಶಾಪ್ನಲ್ಲಿ ಆಕಸ್ಮಿಕ ಬೆಂಕಿ: 7 ಲಕ್ಷ ಮೌಲ್ಯದ ವಸ್ತು ಬೆಂಕಿಗಾಹುತಿ