ಗಂಗಾವತಿ:ಶಾಲಾ ದಾಖಲಾತಿ ಪುಸ್ತಕದಲ್ಲಿಬಾಲಕಿಯ ಜನ್ಮ ದಿನಾಂಕವನ್ನು ತಿದ್ದಿದ ಆರೋಪದ ಮೇರೆಗೆ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರ ಮೇಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೀಡಿದ ದೂರಿನ ಮೇರೆಗೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬಾಲಕಿಯ ಜನ್ಮ ದಿನಾಂಕ ತಿದ್ದಿದ್ದ ಮುಖ್ಯ ಶಿಕ್ಷಕರ ಮೇಲೆ ಎಫ್ಐಆರ್ - Nehru Senior Primary School
ಶಾಲಾ ದಾಖಲಾತಿ ಪುಸ್ತಕದಲ್ಲಿ ಬಾಲಕಿಯ ಜನ್ಮ ದಿನಾಂಕವನ್ನು ತಿದ್ದಿದ ಆರೋಪದ ಮೇರೆಗೆ ಖಾಸಗಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಶಿಶು ಅಭಿವೃದ್ಧಿ ಅಧಿಕಾರಿ ಶ್ವೇತಾ ಸಂಜೀವ್ ಎಂಬುವರು ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
FIR
ಶಿಶು ಅಭಿವೃದ್ಧಿ ಅಧಿಕಾರಿ ಶ್ವೇತಾ ಸಂಜೀವ್ ಎಂಬುವರು ನವಲಿ ಗ್ರಾಮದ ನೆಹರೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪರಪ್ಪ ಹಂಚಿನಾಳ ಎಂಬುವವರ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನ್ವಯ ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವಲಿ ಗ್ರಾಮದ ಜಡಿಯಮ್ಮ ಈರಪ್ಪ ಎಂಬ ಬಾಲಕಿಯ ಜನ್ಮ ದಿನಾಂಕ 05.02.2003 ಎಂದು ಇದೆ. ಆದರೆ ಶಾಲಾ ದಾಖಲಾತಿಯಲ್ಲಿ 01.06.2000 ಎಂದು ತಿದ್ದಿ ಸುಳ್ಳು ದಾಖಲಾತಿಗಳನ್ನು ನೀಡುವ ಮೂಲಕ ಮುಖ್ಯ ಶಿಕ್ಷಕ ಕೃತ್ಯ ಎಸಗಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶ್ವೇತಾ ಒತ್ತಾಯಿಸಿದ್ದಾರೆ.